ಕೆಲಸವಿಲ್ಲದ ತನ್ನ ಉದ್ಯೋಗಿಗಳಿಗೆ 1 ವರ್ಷದಿಂದ ಸಂಬಳ ನೀಡುತ್ತಿದೆ Google​!: ಕಾರಣ ಕೇಳಿದ್ರೆ ಅಚ್ಚರಿಪಡೋದು ಗ್ಯಾರಂಟಿ

dk - 2025-04-09T201951.953
Published on

Google​ : ಕಳೆದ 1 ವರ್ಷದಿಂದ ಕೆಲಸವಿಲ್ಲದೇ ಇರುವ ತನ್ನ ಉದ್ಯೋಗಿಗಳಿಗೆ ಗೂಗಲ್​(Google) ವೇತನ ನೀಡುತ್ತದೆ ಎಂಬ ಹೊಸ ವಿಚಾರದ ಇದೀಗ ಬಹಿರಂಗಗೊಂಡಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ದೊಡ್ಡ ಕಂಪನಿಗಳು ಕಾರಣ ಹೇಳದೆ ಪರೋಕ್ಷವಾಗಿ ಅಥವಾ ನೇರವಾಗಿ ಲಕ್ಷಾಂತರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿವೆ.ಆದರೆ, ಗೂಗಲ್​ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಗೂಗಲ್​ನಲ್ಲಿ ಕೆಲಸ ಮಾಡದೇ ಇರುವ ತನ್ನ ಸಿಬ್ಬಂದಿಗೆ 1 ವರ್ಷದಿಂದ ವೇತನ ನೀಡುವ ಮೂಲಕ ಕೆಲಸದ ವಿಚಾರದಲ್ಲಿ ವಿಭಿನ್ನವಾದ ದಾರಿ ತುಳಿದಿದೆ.

ಗೂಗಲ್‌ನ AI ಶಾಖೆಯ ಡೀಪ್‌ಮೈಂಡ್‌ನ ಕೆಲವು ಎಂಜಿನಿಯರ್‌ಗಳಿಗೆ ಇಡೀ ವರ್ಷ ಯಾವುದೇ ಕೆಲಸ ಮಾಡದೆ ಸಂಬಳ ನೀಡಲಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಇದಕ್ಕೆ ಈ ವಿಭಿನ್ನ ನಿಯಮನೇ ಕಾರಣ

ಡೀಪ್‌ಮೈಂಡ್‌ನ ಕೆಲವು ಹಳೆಯ ಉದ್ಯೋಗಿಗಳು ಗೂಗಲ್​ ಸೇರಿದಂತೆ ಎಲ್ಲಿಯೂ ಕೆಲಸ ಮಾಡುತ್ತಿಲ್ಲವಾದರೂ ಇನ್ನೂ ಕಂಪನಿಯಿಂದ(ಗೂಗಲ್​ನಿಂದ) ಸಂಬಳ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ವಿಚಿತ್ರ ಎನಿಸಿದರೂ ಕಂಪನಿಯನ್ನು ತೊರೆದ ನಂತರ ಉದ್ಯೋಗಿ ಬೇರೆ ಯಾವುದೇ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವುದನ್ನು ತಡೆಯುವ ಗೂಗಲ್​ನ ಹೊಸ ನಿಯಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡೀಪ್‌ಮೈಂಡ್‌ನಲ್ಲಿ, ಅಂತಹ ಉದ್ಯೋಗಿಗಳನ್ನು "ವಿಸ್ತೃತ ಉದ್ಯಾನ ರಜೆ" ಮೇಲೆ ಇರಿಸಲಾಗಿದೆ, ಅಂದರೆ ಅವರು ಕಂಪನಿಯ ಭಾಗವಾಗಿಲ್ಲ ಆದರೆ ಬೇರೆ ಯಾವುದೇ ಕಂಪನಿಗೆ ಹೋಗದಂತೆ ಇಡೀ ವರ್ಷ ಕೆಲಸ ಮಾಡದೆ ಅವರಿಗೆ ಸಂಬಳ ನೀಡಲಾಗುತ್ತಿದೆ.

ಗೂಗಲ್​​ ಹೇಳಿದ್ದೇನು..?

ಗೂಗಲ್​ ತನ್ನ ಎಲ್ಲಾ ಒಪ್ಪಂದ ಮತ್ತು ನಿಯಮಗಳಿಗೆ ಬದ್ಧವಾಗಿದೆ. ಕಂಪನಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳುಲು ಸ್ಪರ್ಧಾತ್ಮಕವಲ್ಲದ ಷರತ್ತುಗಳನ್ನು ಬಳಸುತ್ತದೆ ಎಂದು ಪರೋಕ್ಷವಾಗಿ ಈ ಹೊಸ ನಿಯಮದ ಬಗ್ಗೆ ಒಪ್ಪಿಕೊಂಡಿದೆ. ಇದೀಗ ಈ ಹೊಸ ನಿಯಮದ ಬಗ್ಗೆ ಉದ್ಯೋಗ ಕ್ಷೇತ್ರಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net