ಗೂಡ್ಸ್ ವಾಹನದ ಟಯರ್ ಸಿಡಿದು ಇಬ್ಬರಿಗೆ ಗಾಯ

21 HANUR 4
Published on

ಹನೂರು : ತಾಲೂಕಿನ ಎಲ್ಲೇಮಾಳ ಮಾರ್ಗದ ಮೂಲಕ ಕೌದಳ್ಳಿ ಕಡೆಗೆ ಗುರುವಾರ ತೆರಳುತ್ತಿದ್ದ ತರಕಾರಿ ತುಂಬಿದ ಗೂಡ್ಸ್ ವಾಹನದ ಟಯರ್ ಸಿಡಿದು ಮಗುಚಿ ಬಿದ್ದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ತಾಲೂಕಿನ ಕೌದಳ್ಳಿ ಗ್ರಾಮದ ಚಾಲಕ ಸದ್ದಾಂ ಹಾಗೂ ಅಲ್ತಾಫ್ ಗಾಯಗೊಂಡವರು. ಮೈಸೂರಿನಿಂದ ತರಕಾರಿ ತುಂಬಿಕೊಂಡು ಸಂಜೆ 4.30ರ ವೇಳೆಯಲ್ಲಿ ಕೌದಳ್ಳಿ ಕಡೆಗೆ ತೆರಳುತ್ತಿದ್ದಾಗ ಶ್ರೀ ಆಂಜನೇಯಸ್ವಾಮಿ ದೇಗುಲದ ಬಳಿ ಟಯರ್ ಸಿಡಿದು ರಸ್ತೆಗೆ ಮಗುಚಿದೆ. ಪರಿಣಾಮ ಇಬ್ಬರೂ ಗಾಯಗೊಂಡಿದ್ದು, ತರಕಾರಿ ಎಲ್ಲ ರಸ್ತೆ ಪಾಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ತುರ್ತು ವಾಹನ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಸ್ಥಳೀಯರು ಖಾಸಗಿ ಕಾರಿನ ಮೂಲಕ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net