

ರಾಣೆಬೆನ್ನೂರ: ಶಿಕ್ಷಣವು ಜೀವನದ ಮಾರ್ಗವಾಗಿದೆ. ವಿದ್ಯಾಥಿರ್ಗಳು ಕಲಿಕಾ ಹಂತದಲ್ಲಿ ಶಿಸ್ತು, ಸಂಯಮ, ನೈತಿಕತೆ, ಸಂಸ್ಕಾರ, ಸಂಸತಿ ಅಳವಡಿಸಿಕೊಂಡರೆ ಅವರ ಮುಂದಿನ ಜೀವನ ಬಹಳ ಸಂತಸದಾಯಕವಾಗಿರುತ್ತದೆ ಎಂದು ದಾವಣಗೆರೆಯ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 17ರಲ್ಲಿ ಸೋಮವಾರ ಏರ್ಪಡಿಸಿದ್ದ ಶಾಲಾ ವಾಷಿರ್ಕೋತ್ಸವ ಹಾಗೂ ವಿದ್ಯಾಥಿರ್ಗಳಿಂದ ತಂದೆ&-ತಾಯಿಗಳ ಪಾದಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಶಾಮಸುಂದರ ಅಡಿಗ ಮಾತನಾಡಿ, ಸರ್ಕಾರದ ಪ್ರೋತ್ಸಾಹಕರ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಾಲಕರು ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಶಿಕ್ಷಕರೊಂದಿಗೆ ಕೈ ಜೋಡಿಸಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಆನಂದ ಚಿನ್ನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ, ರಾಮಕೃಷ್ಣ ತಾಂಬೆ, ಕ್ಷೇತ್ರ ಸಮನ್ವಯಾಧಿಕಾರಿ ಎಲ್. ಮಂಜನಾಯ್ಕ, ಪ್ರಾಚಾರ್ಯ ಬಿ.ಪಿ. ಶಿಡೇನೂರ, ಎಂ.ಎಸ್. ಪ್ರಸನ್ನಕುಮಾರ, ಸೋಮಶೇಖರ ಆರ್., ವಿನಾಯಕ ಹಮ್ಮಿಗೆ, ವೀರಬಸಯ್ಯ ಹಿರೇಮಠ, ಉಮಾ ಗೌಡ್ರ, ಹನುಮಂತಪ್ಪ ಸಿದ್ದನಕೋಟೆ, ಶಂಭುಲಿಂಗಪ್ಪ ಅಟವಾಳಗಿ ಮತ್ತಿತರರಿದ್ದರು.