ರಸ್ತೆ ಓಟ ಸ್ಪರ್ಧೆಗೆ ಉತ್ತಮ ಸ್ಪಂದನೆ

run web
Published on

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಸ್ತೆ ಓಟ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು. ನೂರಾರು ಸಂಖ್ಯೆಯಲ್ಲಿ ಮಕ್ಕಳು, ಯುವಕ, ಯುವತಿಯರು, ಸಾರ್ವಜನಿಕರ ಓಡಿ ಸಂಭ್ರಮಿಸಿದರು. ಓವೆಲ್ ಮೈದಾನದಲ್ಲಿ ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಓಟಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಸಾ.ರಾ.ಮಹೇಶ್, ಹಿರಿಯ ಹಾಕಿ ತರಬೇತುದಾರ ಡಾ.ಪುಲಕೇಶಿ ವೈ.ಶೆಟ್ಟಪ್ಪನವರ್, ಹಿರಿಯ ವಕೀಲ ವೆಂಕಟೇಶ್, ಪಾರ್ಥ ಸಾರಥಿ, ಅಥ್ಲೆಟಿಕ್ಸ್ ತರಬೇತುದಾರರಾದ ರವಿ, ಪುನೀತ್ ಇತರರಿದ್ದರು. ಓಟದಲ್ಲಿ 10 ರಿಂದ 15 ವರ್ಷ ಬಾಲಕ, ಬಾಲಕಿಯರು, 15 ರಿಂದ 30, 31 ರಿಂದ 50, 50 ವರ್ಷ ಮೇಲ್ಪಟ್ಟ ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ನೈನಿಕರು ಹಾಗೂ ಮಾಜಿ ಸೈನಿಕರ 2 ಕಿ.ಮೀ. ಸೌಹಾರ್ದ ಓಟ ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net