

ಮೈಸೂರು: ರಾಜ್ಯಾದ್ಯಂತ ಮುಂಗಾರು ಆರ್ಭಟಿಸುತ್ತಿದ್ದು, ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮೋಡ ಕವಿದ ವಾತಾವರಣ ಕಾಣಿಸಿ ಕೊಂಡು ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಜಿಲ್ಲೆಯಲ್ಲಿ ಜು.18 ರಂದು 12 ಮಿ.ಮೀ., 19 ರಂದು 8 ಮಿ.ಮೀ., 20 ರಂದು 4 ಮಿ.ಮೀ., 21 ರಂದು 3 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಜು.18, 19 ರಂದು ಉತ್ತಮ ಮಳೆ ಸುರಿಯಲಿದ್ದು, 20 ಮತ್ತು 21 ರಂದು ಮಳೆಯ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ 17 ರಿಂದ 18 ಡಿಗ್ರಿ ಸೆಲ್ಸಿಯಸ್, ಗರಿಷ್ಠ 27 ರಿಂದ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಗಾಳಿಯು ಗಂಟೆಗೆ 5 ರಿಂದ 7 ಕಿ.ಮೀ. ವೇಗದಲ್ಲಿ ಬೀಸಲಿದೆ.
ತಾಲೂಕುವಾರು ವಿವರ: ಎಚ್.ಡಿ. ಕೋಟೆ ತಾಲೂಕಿನಲ್ಲಿ ಜು.18 ರಂದು 8.3 ಮಿ.ಮೀ., 19 ರಂದು 12.6 ಮಿ.ಮೀ., 20 ರಂದು 1.9 ಮಿ.ಮೀ., 21 ರಂದು 2.1 ಮಿ.ಮೀ.ಮಳೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಹುಣಸೂರು ತಾಲೂಕಿನಲ್ಲಿ ಜು.18 ರಂದು 19.7 ಮಿ.ಮೀ., 19 ರಂದು 18 ಮಿ.ಮೀ., 20 ರಂದು 4.9 ಮಿ.ಮೀ., 21 ರಂದು 4.1 ಮಿ.ಮೀ., ಕೆ.ಆರ್. ನಗರ ತಾಲೂಕಿನಲ್ಲಿ ಜು.18 ರಂದು 18.5 ಮಿ.ಮೀ., 19 ರಂದು 12.4 ಮಿ.ಮೀ., 20 ರಂದು 5.4 ಮಿ.ಮೀ., 21 ರಂದು 5.2 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.
ಮೈಸೂರು ತಾಲೂಕಿನಲ್ಲಿ ಜು.18 ರಂದು 14.9 ಮಿ.ಮೀ., 19 ರಂದು 14.5 ಮಿ.ಮೀ., 20 ರಂದು 4.5 ಮಿ.ಮೀ., 21 ರಂದು 3.8 ಮಿ.ಮೀ., ನಂಜನಗೂಡು ತಾಲೂಕಿನಲ್ಲಿ ಜು.18 ರಂದು 10.9 ಮಿ.ಮೀ, 19 ರಂದು 8.5 ಮಿ.ಮೀ., 20 ರಂದು 2.8 ಮಿ.ಮೀ., 21 ರಂದು 1.3 ಮಿ.ಮೀ., ತಿ.ನರಸೀಪುರ ತಾಲೂಕಿನಲ್ಲಿ ಜು.18 ರಂದು 9.7 ಮಿ.ಮೀ., 19 ರಂದು 4.3 ಮಿ.ಮೀ., 20 ರಂದು 3.5 ಮಿ.ಮೀ., 21 ರಂದು 1.6 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ.
ರೈತರಿಗೆ ಸಲಹೆಗಳು: ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ. ಸುಮಂತ್ ಕುಮಾರ್ ಸಲಹೆಗಳನ್ನು ನೀಡಿದ್ದಾರೆ.
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಲಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಮಣ್ಣಿಯ ಪರೀಕ್ಷೆಯ ಶಿಫಾರಸುಗಳ ಆಧಾರದ ಮೇಲೆ ರಸಗೊಬ್ಬರವನ್ನು ಹಾಕಬೇಕು ಹಾಗೂ ಪೋಷಕಾಂಶಗಳು ಸೋರಿಕೆಯಾಗುವುದನ್ನು ತಪ್ಪಿಸಲು ವಿಭಜಿಸಿ ಎರಚಬೇಕು. ಮಣ್ಣಿನ ಫಲವತ್ತತೆ ಸುಧಾರಿಸಲು ಸಾವಯವ ಗೊಬ್ಬರ ಬಳಸಬೇಕು. ಮಳೆಯಿಂದ ಕಳೆ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಳೆ ನಿಯಂತ್ರಿಸಲು ಸೂಕ್ತ ಕ್ರಮ ವಹಿಸಬೇಕು. ಭತ್ತ ಹಾಗೂ ಜೋಳದಲ್ಲಿ ಕಾಂಡ ಕೊರೆಯುವ ಕೀಟಗಳ ಬಗ್ಗೆ ನಿಗಾ ವಹಿಸಬೇಕು. ಇದಕ್ಕೆ ಫೆರೋಮೋನ್ ಬಲೆಗಳು ಹಾಗೂ ಜೈವಿಕ ನಿಯಂತ್ರಣ ವಿಧಾನಗಳನ್ನು ಬಳಸಬೇಕು. ಹೆಚ್ಚಿನ ಆರ್ದ್ರತೆಯು ಶಿಲೀಂದ್ರ ರೋಗಗಳನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಶಿಲೀಂದ್ರನಾಶಕ ಬಳಸಬೇಕು ಎಂದು ಎಂದು ಸಲಹೆ ನೀಡಿದ್ದಾರೆ.