ಹೊನ್ನೂರು ಪಂಚಾಯಿತಿ ನರೇಗಾದಲ್ಲಿ ಉತ್ತಮ ಪ್ರಗತಿ

Oplus_0
ಯಳಂದೂರು ತಾಲೂಕಿನ ಹೊನ್ನೂರು ಗ್ರಾಪಂ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಪಿಡಿಒ ನಿರಂಜನ್ ಕುಮಾರ್ ಮಾತನಾಡಿದರು. ಅಧ್ಯಕ್ಷ ಎಂ. ಗುರುಪ್ರಸಾದ್ ಉಪಾಧ್ಯಕ್ಷೆ ನೇತ್ರಾವತಿ ಸೇರಿದಂತೆ ಅನೇಕರು ಇದ್ದರು.
Published on

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಪಿಡಿಒ ನಿರಂಜನ್‌ಕುಮಾರ್ ಮಾಹಿತಿ ನೀಡಿದರು.

ಹೊನ್ನೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ನರೇಗಾ ಸಾಮಾಜಿಕ ಪರಿಶೋಧನಾ ಹಾಗೂ 15 ನೇ ಹಣಕಾಸು ಯೋಜನೆಯ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.

ಈ ಸಾಲಿನಲ್ಲಿ ಒಟ್ಟು 206 ಕಾಮಗಾರಿಗಳು ನಡೆದಿವೆ. ಇದರಲ್ಲಿ ತೋಟಗಾರಿಕಾ ಇಲಾಖೆಯ 3, ಅರಣ್ಯ ಇಲಾಖೆಯ 2, ಪಂಚಾಯತ್ ರಾಜ್ ಇಲಾಖೆಯ 37 ಹಾಗೂ ಗ್ರಾಮ ಪಂಚಾಯಿತಿಯ 164 ಕಾಮಗಾರಿಗಳು ಸೇರಿವೆ. ಇದರಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಕೆಲಸವನ್ನು ಮಾಡಿದ್ದಾರೆ. ಕೂಲಿ ಮೊತ್ತವಾಗಿ 1.60 ಕೋಟಿ ರೂ. ಸಾಮಗ್ರಿ ಮೊತ್ತ 1.28 ಕೋಟಿ ರೂ. ಸೇರಿದಂತೆ ಒಟ್ಟು 2.89 ಕೋಟಿ ರೂ. ಹಣವನ್ನು ಪಾವತಿಸಲಾಗಿದ್ದು ನಮ್ಮ ಪಂಚಾಯಿತಿಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈತ ಸಂಘದ ಹೊನ್ನೂರು ಪ್ರಕಾಶ್ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗೆ ತೆರಿಗೆ ಕಟ್ಟುವುದಿಲ್ಲ. ಈ ಬಗ್ಗೆ ನೀವು ನಿಮ್ಮ ಮೇಲ್ಮಟ್ಟದ ಅಧಿಕಾರಿಗಳಿಗೆ ಪತ್ರವನ್ನು ಬರೆಯಿರಿ, ಅಲ್ಲದೆ ಇಲ್ಲಿನ ಕುಡಿಯುವ ನೀರು ಕಲುಷಿತವಾಗಿದ್ದು ಶುದ್ಧ ನೀರನ್ನು ಪೂರೈಸಬೇಕು. ನಮ್ಮ ಪಂಚಾಯಿತಿ ನರೇಗಾ ಬಗ್ಗೆ ಗ್ರಾಮಸ್ಥರಲ್ಲಿ ಇನ್ನಷ್ಟು ಅರಿವು ಮೂಡಿಸಿ, ಇ-ಸ್ವತ್ತು ಪಡೆದುಕೊಳ್ಳಲು ಇರುವ ತೆರಿಗೆಯನ್ನು ಶೇ. 10ಕ್ಕೆ ಇಳಿಸಬೇಕು, ಕಾಲುವೆಗಳನ್ನು ದುರಸ್ತಿ ಮಾಡಿಸಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಹಾಜರಿರಬೇಕು, ಇಲಾಖೆಯ ಮಾಹಿತಿಗಳನ್ನು ನೀಡಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ಗ್ರಪಂ ಅಧ್ಯಕ್ಷ ಎಂ.ಗುರುಪ್ರಸಾದ್, ಉಪಾಧ್ಯಕ್ಷೆ ನೇತ್ರಾವತಿ ಸದಸ್ಯರಾದ ಆರ್.ಪುಟ್ಟಬಸವಯ್ಯ, ಇಂದಿರಾ, ಎಚ್.ಕೆ.ಶಿವಪ್ರಕಾಶ್, ಎ.ನಾಗರತ್ನಮ್ಮ, ಜಿ.ಅನಿತನಿರಂಜನ್, ಜಯಮ್ಮ, ಭಾಗ್ಯಮ್ಮ, ಟಿ.ಎನ್.ರಾಧಾ, ಎಚ್.ಜಿ.ನಾಗರಾಜು, ರಾಧಾ, ಎಚ್.ಆರ್. ಕುಮಾರ್, ಕೆ.ಚಿನ್ನಸ್ವಾಮಿ, ಎನ್.ಶಂಕರ್‌ರೂಪೇಶ್ ಗ್ರಾಪಂ ಸಿಬ್ಬಂದಿ ಮಹದೇವಸ್ವಾಮಿ, ಮುಖಂಡ ಲಿಂಗರಾಜು ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net