ಶಿಶುಗಳ ಉತ್ತಮ ಆರೈಕೆಯೇ ಆರೋಗ್ಯದ ಭವಿಷ್ಯ

klr mnc
ಕೋಲಾರ ನಗರ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ನವ ಜಾತ ಶಿಶು ಆರೈಕೆ (ಎಂಎನ್‌ಸಿಯು) ಘಟಕವನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ ಬುಧವಾರ ಉದ್ಘಾಟಿಸಿದರು. ಡಾ.ಮಮತಾ, ಡಾ.ಮಂಜುನಾಥ್, ಡಾ.ಕಮಲಾಕರ್, ಡಾ.ಸುಮನ್ ರಾವ್, ಡಾ.ಸುಧಾರೆಡ್ಡಿ ಇದ್ದರು.
Published on

ಕೋಲಾರ: ಮಗು ಜನಿಸಿದಾಗ ಬಹಳ ಜಾಗರೂಕತೆಯಿಂದ ಆರೈಕೆ ಮಾಡಿದಾಗ ಮಾತ್ರ ಭವಿಷ್ಯದಲ್ಲಿ ಆರೋಗ್ಯವಂತರಾಗಿರಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.

ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ನವ ಜಾತ ಶಿಶು ಆರೈಕೆ (ಎಂಎನ್‌ಸಿಯು) ಘಟಕವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಮಕ್ಕಳ ಆರೈಕೆಯು ಮೊದಲ ಹಂತವಾಗಿದ್ದು, ಇಲ್ಲಿಂದಲ್ಲೇ ಗುಣಟ್ಟದ ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ತಾಯಿಯ ಮತ್ತು ನವಜಾತ ಶಿಶುಗಳ ಆರೋಗ್ಯದ ಫಲಿತಾಂಶಗಳ ಮೇಲೆ ಎಂಎನ್‌ಸಿಯು ರೂಪಾಂತರದ ಪರಿಣಾಮ ಬೀರುತ್ತದೆ. ಅತ್ಯಾಧುನಿಕ ಸೌಲಭ್ಯದ ಪ್ರಾರಂಭವು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಮೈಲಿಗಲ್ಲು ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಮತ್ತು ಸೇಂಟ್ ಜಾನ್ಸ್ ತಂಡದ ಆರೋಗ್ಯದ ಗುಣಮಟ್ಟವನ್ನು ಸುಧಾರಿಸುವ ಭದ್ರತೆಗೆ ಸಾಕ್ಷಿಯಾಗಿದೆ. ತಾಯಿಯ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕೆ ಗಮನಾರ್ಹ ಸುಧಾರಣೆಗಳನ್ನು ತರಲು ಭರವಸೆ ನೀಡುತ್ತದೆ. ಕೋಲಾರ ಮತ್ತು ಹೊರಗಿನ ಕುಟುಂಬಗಳಿಗೆ ಆರೋಗ್ಯಕರ ಭವಿಷ್ಯ ಖಾತ್ರಿಪಡಿಸುತ್ತದೆ ಎಂದರು.

ಸೇAಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ತಂಡದ ಮುಖ್ಯಸ್ಥೆ ಡಾ.ಸುಮನ್ ರಾವ್ ಮಾತನಾಡಿ, ಗಾಯವಾದಾಗ, ನೋವಾದಾಗ ಮೊದಲು ಬಾಯಿಂದ ಅಮ್ಮಅಂತ ಕರೆಯುತ್ತೇವೆ. ನವಜಾತ ಶಿಸು ಮರಣ ಪ್ರಮಾಣ ಕಡಿಮೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನವಜಾತ ಶಿಶುಗಳನ್ನು ಬಹಳ ಸೂಕ್ಷ್ಮತೆಯಿಂದ ಆರೈಕೆ ಮಾಡಲು ಘಟಕ ತೆರೆಯಲಾಗಿದೆ ಎಂದು ಹೇಳಿದರು.

ಅಮ್ಮ ಮಗುವಿನ ಮರಣ ಸಂಪೂರ್ಣವಾಗಿ ತಡೆಯಲು ವಿಶ್ವ ಸಂಸ್ಥೆಯ ಮಾರ್ಗಸೂಚಿಯೇ ಇದೆ. ಚಿಕ್ಕಮಕ್ಕಳನ್ನು ನೋಡಿಕೊಳ್ಳುವುದೇ ಸವಾಲಿನ ಕೆಲಸ. ಗುಣ್ಣಮಟ್ಟದ ಕಾರ್ಯಕ್ಕೆ ಕೋಲಾರ ಜಿಲ್ಲೆಯೂ ಮಾದರಿಯಾಗಲಿ ಎಂದು ಅಶಿಸಿದರು.

ವಿಜ್ಞಾನಿಗಳು, ಅವರ ಅಚಲವಾದ ಸಮರ್ಪಣೆ ಮತ್ತು ಪರಿಣಿತಿಯು ಈ ಅದ್ಭುತ ಉಪಕ್ರಮವನ್ನು ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ನವಜಾತ ಶಿಶುಗಳಿಗಾಗಿ 24*7 ತೀವ್ರ ನಿಗಾ ಘಟಕವು ಸಜ್ಜುಗೊಂಡಿದೆ. ಆಕ್ರಮಣ ಶೀಲವಲ್ಲದ ವಾತಾವರಣ, ಪ್ರತಿಜೀವಕಗಳು, ಒಟ್ಟು ಪ್ಯಾರೆರಲ್ ಪೋಷಣೆ ಮತ್ತು ಬಹುಚಾನಲ್ ಮಾನಿಟರಿಂಗ್ ಸಿಸ್ಟಮ್‌ಗಳಂತಹ ಸುಧಾರಿತ ಸೌಲಭ್ಯಗಳನ್ನು ಘಟಕವು ಒಳಗೊಂಡಿದೆ ಎಂದರು.

ಜಿಲ್ಲಾ ಶಸ್ತç ಚಿಕಿತ್ಸಕಿ ಡಾ.ಮಮತಾ, ಮಕ್ಕಳ ತಜ್ಞರಾದ ಡಾ.ಶ್ರೀನಾಥ್, ಡಾ.ಕಮಲಾಕರ್, ಸ್ತಿರೋಗ ತಜ್ಞರಾದ ಡಾ.ನಾರಾಯಣಸ್ವಾಮಿ, ಡಾ.ಸುಧಾರೆಡ್ಡಿ, ಡಾ.ದೀಪಾ, ಡಾ.ಆಶಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net