ಇಂದು ಗೋಲ್ಡನ್‌ ಸ್ಟಾರ್‌ ಗಣೇಶ್ ಮತ್ತು ರುಕ್ಮಿಣಿ ವಸಂತ ನಟನೆಯ ಸಿನಿಮಾ ʼಬಾನದಾರಿಯಲಿʼ ರಿಲೀಸ್​​​

bmix (1)
Published on

ಇಂದು ಸಂಜೆ ಬಹುನಿರೀಕ್ಷಿತ ಬಾನದಾರಿಯಲಿ ಸಿನಿಮಾ ರಿಲೀಸ್​​​ ಆಗಲಿದೆ. ʼಸಪ್ತ ಸಾಗರದಾಚೆಯಲಿʼ ಖ್ಯಾತಿಯ ರುಕ್ಮಿಣಿ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ ಒಗ್ಗೂಡಿ ತಯಾರಾಗುತ್ತಿರುವ 4ನೇ ಸಿನಿಮಾ ಇದಾಗಿದೆ.


'ಬಾನದಾರಿಯಲ' ಟ್ರೇಲರ್‌ ಕಂಡಾಗಲೇ ಇದೊಂದು ಪ್ರೀತಿ-ಪ್ರಣಯದ ಕುರಿತಾದ ಕಥೆಯಾಗಿದ್ದು, ವಿಭಿನ್ನ ರೀತಿಯಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.
ಅಪ್ಪ-ಮಗಳ ಸಂಬಂಧ, ಪ್ರೇಮಿಗಳ ನಡುವಿನ ಬಂಧ ಹಾಗೂ ಪ್ರೇಮಿಗಳ ನಡುವಿನ ಕನಸು ಇವೆಲ್ಲದರ ಸಮ್ಮಿಲನವೇ ʼಬಾನದಾರಿಯಲಿʼ ಎಂದರೆ ತಪ್ಪಾಗಲಿಕ್ಕಿಲ್ಲ. ಸಿನಿಮಾದಲ್ಲಿ ಬಾಲ್ಯದಿಂದಲೇ ಕಾಡು, ಪ್ರಾಣಿ-ಪಕ್ಷಿಗಳು , ಪರಿಸರ ಮೇಲಿನ ಕಾಳಜಿ ಇವೆಲ್ಲವೂ ಒಂದಿಂಚೂ ಜಾಸ್ತಿಯೇ ಇರುತ್ತದೆ.


ಸಿನಿಮಾದಲ್ಲಿ ನಾಯಕ ಕ್ರಿಕೆಟರ್​​ ಆಗಿರುತ್ತಾನೆ. ಈ ವಾರದಿಂದ ಪ್ರೇಮಿಗಳಿಗೆ ಹಬ್ಬ. ಕೈ ಕೈ ಹಿಡಿದು ಮರ ಸುತ್ತೋ ಬದ್ಲು ಥಿಯೇಟರ್‌ಗೆ ಹೋಗಿ ಫ್ರೆಶ್ ಲವ್ ಸ್ಟೋರಿ ನೋಡಿ ಫೀಲ್‌ದ ಲವ್ ಅಂತ ತನ್ನ ಪ್ರೀತಿಯನ್ನ ಫೀಲ್ ಮಾಡ್ಬಹುದು. ಯಾಕಂದ್ರೆ ಸ್ಯಾಂಡಲ್ವುಡ್ ಬೆಳ್ಳಿತೆರೆ ಮೇಲೆ ಗೋಲ್ಡನ್ ಸ್ಟಾರ್ ಗಣೇಶ್ರ ಫ್ರೆಶ್ ಲವ್ ಸ್ಟೋರಿ ಬಾನದಾರಿಯಲಿ ಸಿನಿಮಾ ರಿಲೀಸ್ ಆಗುತ್ತಿದೆ.


ಸಿನಿಮಾದಲ್ಲಿ ರಕ್ಮಿಣಿ ವಸಂತ್​​, ಕ್ಯೂಟ್ ಹುಡುಗನಿಗೆ ಕ್ಯೂಟ್ ಗರ್ಲ್ ಪೇರ್ ಆಗಿರ್ತಾರೆ. ಈಗ ನಾಲ್ಕನೇ ಭಾರಿ ಗಣೇಶ್ ಹಾಗು ಪ್ರೀತಂ ಗುಬ್ಬಿ ಜೊತೆಗಾಗಿ ಬಾನದಾರಿಯಲಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net