- ಕನ್ನಡ ಚಿತ್ರಗಳು ಓಡುತ್ತಿಲ್ಲ, ಒಳ್ಳೆ ಕಂಟೆಂಟ್ ಬರುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಗ್ಯಾಪಲ್ಲಿ ಒಂದೊಳ್ಳೆ ಸಿನಿಮಾ ಥಿಯೇಟರ್ಗಳಲ್ಲಿ ನಿಂತುಕೊಂಡುಬಿಟ್ಟರೆ ಅದು ಎಷ್ಟು ಬಿಜಿನೆಸ್ ಮಾಡುತ್ತೋ ಊಹಿಸಲೂ ಸಾಧ್ಯವಿಲ್ಲ. ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿಬಿಡಬಹುದು. ಇವತ್ತು $15 ಕೋಟಿ, $20 ಕೋಟಿ ಕೇವಲ ಒಂದು ವಾರದ ಕಲೆಕ್ಷನ್. ಏರಿಳಿತ ಆಗಿದೆ ನಿಜ. ಇನ್ನು ಆರು ತಿಂಗಳಲ್ಲಿ ಒಂದು ಕನ್ನಡ ಸಿನಿಮಾ ದೊಡ್ಡ ಹಿಟ್ ಆಗಲಿದೆ. ಇವತ್ತು ಸಿನಿಮಾ ಗಳಿಕೆಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಸಿನಿಮಾದಲ್ಲಿ ಆದಾಯ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಸಿನಿಮಾಗಳು ಬರುತ್ತಿಲ್ಲವಷ್ಟೇ. ಒಳ್ಳೆ ಟೈಮಲ್ಲಿ ಬಂದರೆ ಹೊಸಬರ ಚಿತ್ರಗಳೂ ಹಿಟ್ ಆಗುತ್ತವೆ. ಹೊಸಬರ ಚಿತ್ರಗಳು ಚೆನ್ನಾಗಿ ಕಲೆಕ್ಷನ್ ಮಾಡಿಕೊಂಡಷ್ಟೂ ಚಿತ್ರರಂಗಕ್ಕೆ ಒಳ್ಳೆಯದೇ. ಮೊದಲೆಲ್ಲ ಥಿಯೇಟರ್ ಕಲೆಕ್ಷನ್ ಮೇಲೆ ಅವಲಂಬಿಸಿದ್ದೆವು. ನಂತರ ಟಿವಿ, ಒಟಿಟಿ ಹಕ್ಕುಗಳಿಂದ ಆದಾಯ ಆರಂಭವಾದ ಬಳಿಕ ಬಜೆಟ್ ಹಿಗ್ಗಿತು. ಈಗ ಟಿವಿ, ಒಟಿಟಿಯಿಂದ ಹಣ ಬರುತ್ತಿಲ್ಲವಾದರೂ, ಥಿಯೇಟರ್ ಕಲೆಕ್ಷನ್ ಹಿಗ್ಗಿದೆ. ತಿಂಗಳಿಗೆ ಎರಡು ಒಳ್ಳೆ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬರುತ್ತಿದ್ದರೆ, ಜನ ಮತ್ತೆ ಥಿಯೇಟರ್ಗೆ ಬಂದೇ ಬರುತ್ತಾರೆ.