ಕಸ್ಟಮ್ಸ್​ ಅಧಿಕಾರಿಗಳಿಂದ 3.756 ಕೆಜಿ ಚಿನ್ನ, 59 ಸಾವಿರ ವಿದೇಶಿ ಬ್ರ್ಯಾಂಡ್​ ಸಿಗರೇಟ್​ ವಶ!

Gold
Published on

ಕೋಲ್ಕತಾ/ಕೋಯಿಕ್ಕೋಡ್​: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3, 756 ಗ್ರಾಂ ಚಿನ್ನ ಮತ್ತು 59 ಸಾವಿರ ಫಾರೀನ್​ ಬ್ರ್ಯಾಂಡ್​ ಸಿಗರೇಟ್ ಅನ್ನು ಕಸ್ಟಮ್ಸ್​ ಅಧಿಕಾರಿಗಳು ಕೇರಳದ ಕೋಯಿಕ್ಕೋಡ್​ ಮತ್ತು ಪಶ್ಚಿಮ ಬಂಗಾಳದ ವಿಮಾನ ನಿಲ್ದಾಣಗಳಲ್ಲಿಂದು ವಶಪಡಿಸಿಕೊಂಡಿದ್ದಾರೆ.

ಕಸ್ಟಮ್ಸ್​ ಅಧಿಕಾರಿಗಳ ಪ್ರಕಾರ ಸುಮಾರು 13 ಮಂದಿಯನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಮೊದಲಿಗೆ ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ 2,601 ಮತ್ತು 624 ಗ್ರಾಂ ಚಿನ್ನ ಕಳ್ಳಸಾಗಾಣೆ ಮಾಡುತ್ತಿದ್ದ 5 ಪ್ರಯಾಣಿಕರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅಲ್ಲದೆ, ವಿದೇಶಿ ಬ್ರ್ಯಾಂಡ್​ನ 59 ಸಾವಿರ ಸಿಗರೇಟ್​ ಅನ್ನು ದೇಶದೊಳಗೆ ತರಲು ಯತ್ನಿಸಿದ 6 ಮಂದಿಯನ್ನು ಸಹ ಬಂಧಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕೋಲ್ಕತಾದ ನೇತಾಜಿ ಸುಭಾಷ್​ ಚಂದ್ರ ಬೋಸ್​ ವಿಮಾನ ನಿಲ್ದಾಣದಲ್ಲಿ ಚಾಕೋಲೇಟ್​ ಪೇಪರ್​ನಲ್ಲಿ ಸುತ್ತಿಟ್ಟಿದ್ದ 531.20 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net