

ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಶನಿವಾರ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನದ ದರದಲ್ಲಿ ಶುಕ್ರವಾರದಂತೆ ಶನಿವಾರವೂ ಇಳಿಕೆ ಕಂಡುಬಂದಿದೆ.
ಚಿನಿವಾರು ಮಾರುಕಟ್ಟೆಯಲ್ಲಿ ಶನಿವಾರ 10 ಗ್ರಾಂ ಚಿನ್ನಕ್ಕೆ 457 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ದರ 46,390 ರೂಪಾಯಿಯಷ್ಟಾಗಿದೆ. ಶುಕ್ರವಾರದಂದು 661 ರೂಪಾಯಿ ಇಳಿಕೆ ಕಂಡುಬಂದಿತ್ತು. ಬೆಳ್ಳಿ ದರದಲ್ಲೂ 347 ರೂಪಾಯಿ ಇಳಿಕೆಯಾಗಿದ್ದು ಒಂದು ಕೆಜಿ ಬೆಳ್ಳಿ ದರ 67,894 ರೂಪಾಯಿಯಷ್ಟಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ (10 ಗ್ರಾಂ) 44,240 ರೂಪಾಯಿಯಿದ್ದರೆ, 24 ಕ್ಯಾರೆಟ್ ಚಿನ್ನದ ದರ 48,280 ರೂಪಾಯಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರದಂದು 22 ಕ್ಯಾರೆಟ್ ಚಿನ್ನದ ದರ (10 ಗ್ರಾಂ.) 46,390 ರೂಪಾಯಿಯಾಗಿದ್ದರೆ, ಮುಂಬೈನಲ್ಲಿ 46,430 ರೂಪಾಯಿಯಾಗಿದೆ. ಚೆನ್ನೈನಲ್ಲಿ 44,650 ರೂಪಾಯಿಯಷ್ಟಿದೆ.
2021ರ ಆರಂಭದಿಂದ ಈವರೆಗೆ ಚಿನ್ನದ ದರದಲ್ಲಿ ಶೇ. 2 ಇಳಿಕೆ ಕಂಡುಬಂದಿದೆ. ಕಳೆದ ವರ್ಷದ ಆಗಸ್ಟ್ಗೆ ಹೋಲಿಸದರೆ 10 ಗ್ರಾಂಗೆ ಸುಮಾರು 7 ಸಾವಿರ ರೂಪಾಯಿ ದರ ಕಡಿಮೆಯಾಗಿದೆ. (ಏಜೆನ್ಸೀಸ್)