82 ಸಾವಿರಕ್ಕೆ ತಲುಪಿದ ಚಿನ್ನ

ವಿಜಯವಾಣಿ (3)
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸತತ ಮೂರನೇ ದಿನವೂ ಏರಿಕೆಯಾಗಿದೆ.

ಶುಕ್ರವಾರ 700 ರೂ. ಹೆಚ್ಚಾಗಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 82 ಸಾವಿರ ರೂ. ಆಗಿದೆ. ಇದು ಗುರುವಾರ ಇದು 81,300 ರೂ. ಇತ್ತು. ಶೇ. 99.5 ಶುದ್ಧತೆಯ ಚಿನ್ನ ಗುರುವಾರ 80,900 ರೂ. ಇದ್ದದ್ದು ಶುಕ್ರವಾರ 81,600 ರೂ. ಆಗಿದೆ. ಬೆಳ್ಳಿಯ ಬೆಲೆ ಶುಕ್ರವಾರ 500 ರೂ.ನಷ್ಟು ಕಡಿಮೆಯಾಗಿ, ಕೆಜಿಗೆ 93,500 ರೂ. ಆಗಿದೆ. ಇದು ಗುರುವಾರ 94 ಸಾವಿರ ರೂ. ಇತ್ತು. ಕಳೆದ ವರ್ಷದ ಅ. 31ರಂದು ಚಿನ್ನವು ಸಾರ್ವಕಾಲಿಕ ಏರಿಕೆ ದಾಖಲಿಸಿತ್ತು. ಅಂದು ಶೇ. 99.9 ಶುದ್ಧತೆಯ ಚಿನ್ನ 82,400 ರೂ. ಮತ್ತು ಶೇ. 99.5 ಶುದ್ಧತೆಯ ಚಿನ್ನ 82 ಸಾವಿರ ರೂ. ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net