

Gold Rates: ಕಳೆದ ವಾರದಿಂದ ಚಿನ್ನ-ಬೆಳ್ಳಿ ದರದಲ್ಲಿ ದೊಡ್ಡ ವ್ಯತ್ಯಾಸಗಳೇನು ಕಂಡುಬಂದಿಲ್ಲ. ಆದರೆ, ಏರಿಳಿತ ಮಾತ್ರ ಸಂಭವಿಸುತ್ತಲೇ ಇದೆ. ಮದುವೆ ಸೀಸನ್ನಲ್ಲೇ ಮತ್ತಷ್ಟು ದುಬಾರಿ ಆಗುತ್ತಿರುವ ಚಿನ್ನ, ಇಳಿಕೆ ಕಂಡರೂ ಅದು ಕೊಂಚ ಮಟ್ಟದಲ್ಲಿ ಮಾತ್ರ ಎಂಬುದು ಗ್ರಾಹಕರಲ್ಲಿ ಬೇಸರ ಮೂಡಿಸಿದೆ.
ಇಂದು (ಮೇ.24) ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಶನಿವಾರ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 550 ರೂ. ಹೆಚ್ಚಾಗಿದೆ. ಆದಾಗ್ಯೂ, ಶುಕ್ರವಾರ 350 ರೂ. ಇಳಿಕೆಯಾಗಿದ್ದರೂ, ಬುಧವಾರ ಮತ್ತು ಗುರುವಾರ ಚಿನ್ನದ ದರ ಏರಿಕೆಯಾಗಿದೆ. ಇದರೊಂದಿಗೆ, ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 3,220 ರೂ. ಜಾಸ್ತಿಯಾಗಿದೆ. ಪರಿಣಾಮವಾಗಿ, 10 ಗ್ರಾಂ ಚಿನ್ನದ ಬೆಲೆ ಮತ್ತೆ 1 ಲಕ್ಷ ರೂ.ಗೆ ಸನ್ನಿಹಿತವಾಗಿದೆ.
ಮತ್ತೊಂದೆಡೆ, ಬೆಳ್ಳಿಯ ಬೆಲೆ ಕೊಂಚ ಇಳಿದಿದೆ. ಪ್ರತಿ ಕೆಜಿ ಬೆಳ್ಳಿಗೆ 100 ರೂ. ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಣನೀಯವಾಗಿ ಏರಿಕೆಯಾಗಿದೆ. ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಒಂದು ಔನ್ಸ್ ಚಿನ್ನದ ಬೆಲೆ 60 ಡಾಲರ್ನಷ್ಟು ಏರಿಕೆಯಾಗಿದ್ದು, 3,357 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ.