

Gold Rate: ಮದುವೆ ಮತ್ತು ಶುಭಾರಂಭ ಕಾರ್ಯಗಳ ಬಿಜಿಯಲ್ಲಿರುವ ಚಿನ್ನದ ಗ್ರಾಹಕರಿಗೆ ಸದ್ಯ ಬೆಲೆ ಏರಿಕೆ ಭಾರೀ ತಲೆಬಿಸಿ ತಂದೊಡ್ಡಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿರುವ ಗೋಲ್ಡ್ ದರ, ಗ್ರಾಹಕರನ್ನು ಕಂಗಾಲಾಗಿಸಿದೆ. ಒಂದು ಲಕ್ಷ ರೂ. ಗಡಿದಾಟಿ ಹೋಗಿರುವ ಚಿನ್ನ ಕಳೆದ ಮೂರು ದಿನಗಳಿಂದ ಇಳಿಕೆಯತ್ತ ಮುಖಮಾಡಿದೆ. ಇಂದೂ ಸಹ ಚಿನ್ನದ ಬೆಲೆ ಕುಸಿದಿದ್ದು, ಕೊಳ್ಳುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಅಂತಾರಾಷ್ಟ್ರೀಯ ಉದ್ವಿಗ್ನತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಕೈಬಿಡುತ್ತಿದ್ದಾರೆ. ಹೂಡಿಕೆದಾರರು ಇತರ ಅಂಶಗಳತ್ತ ನೋಡುತ್ತಿರುವುದೇ ಇದೀಗ ಚಿನ್ನದ ಬೆಲೆಯಲ್ಲಿನ ಕ್ರಮೇಣ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಶನಿವಾರ (ಜು.26) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 550 ರೂ. ಕುಸಿದಿದ್ದರೆ, 22 ಕ್ಯಾರೆಟ್ ಚಿನ್ನ 500 ರೂ. ಇಳಿದಿದೆ. ಇದರೊಂದಿಗೆ, ಕಳೆದ ಮೂರು ದಿನಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 2,400 ರೂ. ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಕಡಿಮೆಯಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ 33 ಡಾಲರ್ನಷ್ಟು ಕುಸಿದಿದೆ. ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 3,336 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.