ಚಿನ್ನದ ಬೆಲೆ ಏರಿಕೆ? ಇಲ್ಲಿದೆ ವಿವರ

golds
Published on

ನವದೆಹಲಿ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ 250 ರೂ.ನಷ್ಟು ಏರಿಕೆ ಕಂಡಿದೆ.

ಸೋಮವಾರ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 89,100 ರೂ. ಇತ್ತು. ಮಂಗಳವಾರ ಅದು 89,350 ರೂ.ಗೆ ಏರಿಕೆಯಾಯಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 88,700 ರೂ. ಇದ್ದದ್ದು 88,950 ರೂ.ಗೆ ಏರಿಕೆಯಾಗಿದೆ. ಫೆ. 20ರಂದು ಶೇ. 99.9ರಷ್ಟು ಶುದ್ಧತೆಯ ಚಿನ್ನ 89,450 ರೂ.ಗೆ ಮತ್ತು ಶೇ. 99.5ರಷ್ಟು ಶುದ್ಧತೆಯ ಚಿನ್ನ 89,050 ರೂ.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿತ್ತು. ಈ ನಡುವೆ, ಬೆಳ್ಳಿಯ ಬೆಲೆ ಕೆಜಿಗೆ 1 ಲಕ್ಷ ರೂ. ಇದ್ದದ್ದು ಮಂಗಳವಾರ 99,500 ರೂ.ಗೆ ಇಳಿದಿದೆ.

ರೂಪಾಯಿ ಬೆಲೆ 51 ಪೈಸೆ ಇಳಿಕೆ: ಅಮೆರಿಕದ ವ್ಯಾಪಾರ ತೆರಿಗೆ ಅನಿಶ್ಚಿತತೆ ಮತ್ತಿತರ ಕಾರಣಗಳಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿಯ ಬೆಲೆಯು ಮಂಗಳವಾರ 51 ಪೈಸೆಯಷ್ಟು ಕುಸಿದು 87.23ಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net