ಚಿನ್ನ ಖರೀದಿಸಿದರೆ ಶೇ.15-18 ಲಾಭ

ವಿಜಯವಾಣಿ (5)
Published on

ನವದೆಹಲಿ: ಹೆಚ್ಚಿರುವ ಬೇಡಿಕೆ ಮತ್ತು ಧನಾತ್ಮಕ ಆರ್ಥಿಕ ಅಂಶಗಳಿಂದಾಗಿ ಸಂವತ್ 2081ರಲ್ಲಿ ಚಿನ್ನವು ಶೇಕಡ 15ರಿಂದ ಶೇ. 18ರಷ್ಟು ಲಾಭ ತಂದುಕೊಡುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದು ಕ್ಯಾಲೆಂಡರ್​ನಲ್ಲಿ ಸಂವತ್ 2081 ಭಾರತೀಯ ಹೂಡಿಕೆದಾರರಿಗೆ ಮಹತ್ವದ ಅವಧಿಯಾಗಿದ್ದು, ದೀಪಾವಳಿಯೊಂದಿಗೆ ಹೊಸ ಹಣಕಾಸು ವರ್ಷದ ಆರಂಭವನ್ನು ಸಂಕೇತಿಸುತ್ತದೆ. ‘ಆಮದು ಸುಂಕದಲ್ಲಿ ಏರಿಕೆ ಮಾಡಿದರೆ ಚಿನ್ನವು ಶೇ.15ಕ್ಕಿಂತಲೂ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆಯೂ ಇದೆ. ಬಡ್ಡಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡರೆ ಚಿನ್ನದ ಲಾಭದಲ್ಲಿ ಇನ್ನಷ್ಟು ಏರಿಕೆಯಾಗಬಹುದು’ ಎಂದು ಎಲ್​ಕೆಪಿ ಸೆಕ್ಯುರಿಟೀಸ್ ಸಂಸ್ಥೆಯ ಕಮಾಡಿಟೀಸ್ ಮತ್ತು ಕರೆನ್ಸಿ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಜತೀನ್ ತ್ರಿವೇದಿ ಹೇಳಿದ್ದಾರೆ.

ಸಂವತ್ 2080ರಲ್ಲಿ ಕೂಡ ಗ್ರಾಹಕರಿಗೆ ಚಿನ್ನ ಮತ್ತು ಬೆಳ್ಳಿ ಒಳ್ಳೆಯ ಲಾಭ ತಂದುಕೊಟ್ಟಿದ್ದವು. ನಿಫ್ಟಿ ಶೇ. 25ರಷ್ಟು ಲಾಭ ಗಳಿಸಿಕೊಟ್ಟಿದ್ದರೆ ಚಿನ್ನ ಶೇ. 30ರಷ್ಟು ಲಾಭ ಮಾಡಿಕೊಟ್ಟಿತ್ತು. ಕಳೆದ ವರ್ಷ ಅ. 29ರಂದು 10 ಗ್ರಾಂಗೆ 61,200 ರೂ. ಇದ್ದ ಚಿನ್ನದ ಬೆಲೆ ಕಳೆದ ಗುರುವಾರ (2024ರ ಅ. 31) 82,400 ರೂ.ಗೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net