ಚಿನ್ನದ ಬೆಲೆಯಲ್ಲಿ ಮತ್ತೆ ಬಂಪರ್ ಇಳಿಕೆ; ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿ

gold
Published on

ಬೆಂಗಳೂರು: ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿದಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ನಿರಂತರವಾಗಿ ಇಳಿಯುತ್ತಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 52, 400 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57.160 ರೂ.

ಬೆಳ್ಳಿ ಬೆಲೆ 1 ಕೆಜಿ: 69,000 ರೂ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 53, 590 ರೂಪಾಯಿ ಇತ್ತು. ಆದರೆ ಇಂದು 52, 400 ರೂಪಾಯಿ ಆಗಿದೆ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 57.370 ರೂಪಾಯಿ ಇತ್ತು. ಆದರೆ ಇಂದು 57.160 ರೂಪಾಯಿ ಆಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 52, 400 ರೂ. ಮುಂಬೈ: 52, 400 ರೂ. ದೆಹಲಿ: 52,550 ರೂ. ಕೇರಳ: 52, 400 ರೂ.

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಚಿನ್ನ ಕೊಳ್ಳುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಹೆಚ್ಚಿನ ಉಳಿತಾಯವೂ ಆಗಲಿದೆ. ಚಿನ್ನಾಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನ ಬೆಳ್ಳಿ ದರ ಇಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net