

ಬೆಂಗಳೂರು: ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..
ಇಂದಿನ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂದಿದೆ. ಚಿನ್ನಾಭರಣ ಪ್ರಿಯರು ಹಾಗೂ ಚಿನ್ನಾಭರಣದ ಮೇಲೆ ಹೂಡಿಕೆ ಮಾಡುವವರು ಪ್ರತಿನಿತ್ಯದ ಚಿನ್ನದ ಬೆಲೆಯ ವಿವರಗಳಿಗಾಗಿ ಈ ಸುದ್ದಿ ಓದಿ..
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,400 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60.440 ರೂ.
ಬೆಳ್ಳಿ ಬೆಲೆ 1 ಕೆಜಿ: 71,500 ರೂ.
ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54.000 ರೂಪಾಯಿ ಇತ್ತು. ಆದರೆ ಇಂದು 55,400 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 1400 ರೂಪಾಯಿ ಏರಿಕೆಯಾಗಿದೆ.
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 58.910 ರೂಪಾಯಿ ಇತ್ತು. ಆದರೆ ಇಂದು 60.440ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 1530 ರೂಪಾಯಿ ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 54,400 ರೂ. ಮುಂಬೈ: 55,400 ರೂ. ದೆಹಲಿ: 55,550 ರೂ. ಕೇರಳ: 55,400 ರೂ.
ಜಾಗತಿಕ ವಲಯದಲ್ಲಿ ಹಣದುಬ್ಬರ, ತೈಲ ಬೆಲೆಯ ಏರಿಳಿತ, ಇಸ್ರೇಲ್ ಪ್ಯಾಲೆಸ್ಟೀನ್ ಯುದ್ಧ ಈ ಎಲ್ಲದರ ನಡುವೆ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲೂ ವ್ಯತ್ಯಾಸವಾಗುತ್ತಲೇ ಇದೆ. ಸರ್ವ ಪಿತೃ ಅಮಾವಾಸ್ಯೆಯ ದಿನವಾದ ಇಂದು ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗಿದೆ.