

ನವದೆಹಲಿ: ಆಭರಣ ಮಾರಾಟಗಾರರು ಮತ್ತು ದಾಸ್ತಾನುದಾರರಿಂದ ಬೇಡಿಕೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ 700 ರೂ.ನಷ್ಟು ಇಳಿಕೆಯಾಗಿದೆ.
ಶೇ. 99.9ರಷ್ಟು ಶುದ್ಧತೆಯ ಚಿನ್ನ ಗುರುವಾರ 10 ಗ್ರಾಂಗೆ 89,450 ರೂ. ಇದ್ದದ್ದು ಶುಕ್ರವಾರ 88,750 ರೂ.ಗೆ ಇಳಿದಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 88,350 ರೂ.ಗೆ ಇಳಿಕೆಯಾಗಿದೆ. ಬೆಳ್ಳಿ ದರ ಕೂಡ 300 ರೂ.ನಷ್ಟು ಕುಸಿದಿದ್ದು ಕೆಜಿಗೆ 1 ಲಕ್ಷ ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
10 ಗ್ರಾಂಗೆ 88,750 ರೂ.
ಬೆಳ್ಳಿ ಕೂಡ 300 ರೂ. ಇಳಿಕೆ