

ನವದೆಹಲಿ: ಜಾಗತಿಕ ಪ್ರವೃತ್ತಿಯನ್ನು ಅನುಸರಿಸಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 500 ರೂ. ಏರಿಕೆಯಾಗಿದೆ.
ಮಂಗಳವಾರ 1,200 ರೂ. ಏರಿಕೆಯೊಂದಿಗೆ 10 ಗ್ರಾಂಗೆ 98,670 ರೂ.ನಲ್ಲಿ ಮುಕ್ತಾಯಗೊಂಡಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ 99,170 ರೂ.ಗೆ ತಲುಪಿತು. ಶೇ. 99.5 ಶುದ್ಧತೆಯ ಚಿನ್ನ ಬುಧವಾರ 450 ರೂ. ಏರಿಕೆಯಾಗಿದ್ದು, 98,600 ರೂ. ತಲುಪಿತು. ಇದು ಮಂಗಳವಾರ 98,150 ರೂ. ಇತ್ತು.
ಇದರಿಂದಾಗಿ ಚಿನ್ನವು ಎರಡು ದಿನಗಳಲ್ಲಿ 1,700 ರೂ. ಏರಿದಂತಾಗಿದೆ. ಬೆಳ್ಳಿ ಬೆಲೆ ಬುಧವಾರ ಕೆಜಿಗೆ 1,04,800 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.