

Gold Price: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿಧಿಸಿದ ಪ್ರತೀಕಾರದ ಸುಂಕಕ್ಕೆ ಜಾಗತಿಕ ಮಾರುಕಟ್ಟೆಯೇ ಅಲ್ಲೋಲ-ಕಲ್ಲೋಲ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರ ಬೆನ್ನಲ್ಲೇ ಚೀನಾ ದೇಶವನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೂ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್, ಷೇರುಪೇಟೆಗೆ ಕೊಂಚ ಚೇತರಿಕೆ ನೀಡಿದ್ದಾರೆ. ಇದು ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಗಣನೀಯವಾಗಿ ಏರಿಕೆ-ಇಳಿಕೆಗೆ ಕಾರಣವಾಗಿದೆ.
ಕಳೆದ ವಾರದಲ್ಲಿ ದಿನದಿಂದ ದಿನಕ್ಕೆ ಏರಿಕೆಯನ್ನೇ ಕಂಡ ಚಿನ್ನ ಇದೀಗ ಭಾರಿ ಬದಲಾವಣೆ ಕಂಡಿದೆ. ಸೋಮವಾರ ಮತ್ತು ಮಂಗಳವಾರ ಚಿನ್ನದ ಬೆಲೆ ಕುಸಿಯಿತು. ಎರಡು ದಿನಗಳಲ್ಲಿ, 10 ಗ್ರಾಂ ಚಿನ್ನ ಸುಮಾರು 500 ರೂ.ಗಳಷ್ಟು ಕುಸಿದಿದೆ. ಆದಾಗ್ಯೂ, ಬುಧವಾರ (ಏ.16) ಚಿನ್ನದ ದರದಲ್ಲಿ ದಿಢೀರ್ ಏರಿಕೆ ಆಗಿರುವುದು ಇದೀಗ ಚಿನ್ನ ಖರೀದಿಸುವ ಗ್ರಾಹಕರಲ್ಲಿ ಚಿಂತೆ ಹೆಚ್ಚಿಸಿದೆ.
ಪ್ರಸ್ತುತ ಡಾಲರ್ ವಿನಿಮಯ ದರವು ಕುಸಿಯುತ್ತಿದೆ. ಡಾಲರ್ ಮೌಲ್ಯದಲ್ಲಿನ ಕುಸಿತದೊಂದಿಗೆ, ಇಂದು ಸ್ಪಾಟ್ ಮಾರುಕಟ್ಟೆಗಳಲ್ಲಿ ಚಿನ್ನದ ದರಗಳು ಸಹ ಭಾರಿ ಏರಿಕೆಯನ್ನು ಕಾಣುತ್ತಿವೆ. ಸದ್ಯದ ಮಟ್ಟಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ (31.10 ಗ್ರಾಂ) ಚಿನ್ನದ ಬೆಲೆ 3,289 ಡಾಲರ್ನಷ್ಟಿದೆ. ಮತ್ತೊಂದೆಡೆ, ಒಂದು ಔನ್ಸ್ ಬೆಳ್ಳಿಯ ಬೆಲೆ ಸ್ವಲ್ಪ ಹೆಚ್ಚಾಗಿದೆ. ಇದು 32.49 ಡಾಲರ್ನಷ್ಟಿದೆ. ಬುಧವಾರ ಬೆಳಗ್ಗೆ ಭಾರತದ ಪ್ರಮುಖ ನಗರಗಳಲ್ಲಿ ದಾಖಲಾದ ಮಾಹಿತಿಯ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ. 990 ರೂ. ಹೆಚ್ಚಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 950 ರೂ. ಹೆಚ್ಚಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಹೆಚ್ಚಾಗಿದೆ. ಒಂದು ಕೆಜಿ ಬೆಳ್ಳಿಯ ಮೇಲೆ 200 ರೂ.ಗೆ ಏರಿಕೆಯಾಗಿದೆ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ,(ಏಜೆನ್ಸೀಸ್).