ಬಂಗಾರದ ಬೆಲೆ 500 ರೂ. ಇಳಿಕೆ

photo-4-689cdbc30b8fd
Published on

ದಾಸ್ತಾನುದಾರರಿಂದ ನಿರಂತರ ಮಾರಾಟದ ಪರಿಣಾಮ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ 500 ರೂ. ಇಳಿದಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನ ಮಂಗಳವಾರ 10 ಗ್ರಾಂಗೆ 1,01,520 ರೂ. ಇದ್ದದ್ದು ಬುಧವಾರ 1,01,020 ರೂ.ಗೆ ತಲುಪಿತು. ಶೇ. 99.5 ಶುದ್ಧತೆಯ ಚಿನ್ನ 1,00,600 ರೂ.ಗೆ ತಲುಪಿತು. ಬೆಳ್ಳಿಯ ಬೆಲೆ ಬುಧವಾರ ಕೆಜಿಗೆ 1,12,000 ರೂ. ಇತ್ತು.

ಷೇರು ಪೇಟೆ ಚೇತರಿಕೆ

ಮುಂಬೈ: ಅಮೆರಿಕದ ಹಣದುಬ್ಬರದಲ್ಲಿನ ಸ್ಥಿರತೆ ಯಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದರಿಂದ; ಲೋಹ, ಆಟೋಮೊಬೈಲ್, ಔಷಧ ಕ್ಷೇತ್ರದ ಷೇರುಗಳ ಖರೀದಿಯಿಂದಾಗಿ ಬುಧವಾರ ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಕಂಡಿತು. ದಿನದ ವಹಿವಾಟಿನ ಮಧ್ಯೆ 448.15 ಅಂಕ ಏರಿಕೆಯಾಗಿ 80,683.74ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 304.32 ಅಂಕ ಏರಿಕೆ ದಾಖಲಿಸಿ 80,539.91ಕ್ಕೆ ಮುಕ್ತಾಯವಾಯಿತು. ನಿಫ್ಟಿ 131.95 ಅಂಕ ಏರಿಕೆಯೊಂದಿಗೆ 24,619.35ಕ್ಕೆ ತಲುಪಿತು. ಜುಲೈನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ 8 ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇ. 1.55) ಇಳಿದಿರುವುದು ಷೇರು ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲ ಶೇ. 0.36ರಷ್ಟು ಇಳಿಕೆಯೊಂದಿಗೆ ಪ್ರತಿ ಬ್ಯಾರೆಲ್​ಗೆ 65.88 ಡಾಲರ್​ಗೆ ಇಳಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net