

ನವದೆಹಲಿ: ದಾಸ್ತಾನುದಾರರು ಮತ್ತು ಚಿಲ್ಲರೆ ಮಾರಾಟಗಾರರು ಖರೀದಿಗೆ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಚಿನ್ನದ ದರ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 1,050 ರೂ.ನಷ್ಟು ಇಳಿಕೆಯಾಗಿದೆ.
ಮಂಗಳವಾರ 10 ಗ್ರಾಂಗೆ 91,250 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರ 90,200 ರೂ.ಗೆ ತಲುಪಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನ 90,800 ರೂ. ಇದ್ದದ್ದು 89,750 ರೂ.ಗೆ ಇಳಿಯಿತು. ಬೆಳ್ಳಿಯ ದರ 500 ರೂ.ನಷ್ಟು ಜಾಸ್ತಿಯಾಗಿದೆ. ಮಂಗಳವಾರ ಕೆಜಿಗೆ 92,700 ರೂ. ಇದ್ದದ್ದು ಬುಧವಾರ 93,200 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.4.9ಕ್ಕೆ ಇಳಿಕೆ
ನವದೆಹಲಿ: 2023ರಲ್ಲಿ ಶೇ. 5ರಷ್ಟಿದ್ದ ನಿರುದ್ಯೋಗ ಪ್ರಮಾಣ 2024ರ ಕ್ಯಾಲೆಂಡರ್ ವರ್ಷದಲ್ಲಿ ಶೇ. 4.9ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಇದಕ್ಕೆ ಪೂರಕವಾಗಿ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆಯ ವಿವರಗಳನ್ನು ಬಿಡುಗಡೆ ಮಾಡಿದೆ.