ಮಾಕನಹಳ್ಳಿ ಮನೆಯಲ್ಲಿ ಚಿನ್ನಾಭರಣ ಕಳವು

Thief
Published on

ಹಿರೀಸಾವೆ: ಹಿರೀಸಾವೆ ಹೋಬಳಿ ಮಾಕನಹಳ್ಳಿ ಗ್ರಾಮದ ಮನೆಗೆ ನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.
ಗ್ರಾಮದ ರಾಜೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸೆ.5ರಂದು ಬೆಳಗ್ಗೆ 10.45ರಲ್ಲಿ ಮಾಕನಹಳ್ಳಿ ರಾಜೇಶ್ ಅವರು ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಕಾಂಪೌಂಡ್‌ನ ಗೂಡಿನಲ್ಲಿಟ್ಟು ಪತ್ನಿಯೊಂದಿಗೆ ಮಲ್ಲಿಗೆರೆ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದರು.


ಜಮೀನಿಗೆ ಹೋಗಿದ್ದ ರಾಜೇಶನ ತಾಯಿ ಮಧ್ಯಾಹ್ನ 1.45ರಲ್ಲಿ ಮನೆಗೆ ಬಂದು ಬೀಗ ತೆಗೆದು ತೊಳೆದು ಒಣಗಿಸಿದ್ದ ಬಟ್ಟೆಗಳನ್ನು ಬೀರುವಿನೊಳಗೆ ಇರಿಸಿ ಲಾಕ್ ಮಾಡಿ ಕೀಯನ್ನು ಬೀರುವಿನ ಮೇಲೆ ಇಟ್ಟು ಪುನಃ ಜಮೀನಿನ ಕಡೆಗೆ ಹೋಗಿದ್ದಾರೆ.


ಊಟಕ್ಕೆ ಮತ್ತೆ 2.45ಕ್ಕೆ ವಾಪಸ್ ಮನೆಗೆ ಬಂದಾಗ ಇಟ್ಟಿದ್ದ ಜಾಗದಲ್ಲಿ ಕೀ ಇಲ್ಲದರ ಜತೆಗೆ ಮನೆ ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಅನುಮಾನಗೊಂಡು ಮಗನಿಗೆ ಈ ವಿಚಾರವನ್ನು ತಿಳಿಸಿದ್ದಾರೆ.


ಸಂಬಂಧಿಕರ ಮನೆಯಿಂದ ಹಿಂದಿರುಗಿದ ರಾಜೇಶ್ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಬೀರುವಿನ ಬಾಗಿಲನ್ನು ಆಯುಧದಿಂದ ಮೀಟಿರುವ ಕಳ್ಳರು, ಅದರಲ್ಲಿಟ್ಟಿದ್ದ 4,57,500 ರೂ. ಮೌಲ್ಯದ ಚಿನ್ನಾಭರಣ ಹಾಗೂ 30,000 ರೂ. ನಗದನ್ನು ಕಳವು ಮಾಡಿದ್ದಾರೆ.
ಹಿರೀಸಾವೆ ಠಾಣೆಗೆ ರಾಜೇಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net