ದುಬೈಗಿಂತಲೂ ಈ 5 ದೇಶಗಳಲ್ಲಿ ಚಿನ್ನ ತೀರಾ ಅಗ್ಗ! ಎಲ್ಲಿ ಗೊತ್ತೆ? | Gold

Bbau (80)
Published on

ನವದೆಹಲಿ: ಈ ವರ್ಷ ಚಿನ್ನದ(Gold) ಬೆಲೆ ದಾಖಲೆಯ ಮಟ್ಟವನ್ನು ದಾಟಿದೆ. 24 ಕ್ಯಾರೆಟ್ ಚಿನ್ನವು ಅಸಾಧಾರಣವಾಗಿ ದುಬಾರಿಯಾಗಿದ್ದು, ಭಾರತದಲ್ಲಿ 10 ಗ್ರಾಂಗೆ 1,25,000 ಬೆಲೆ ನಿಗದಿಪಡಿಸಲಾಗಿದೆ. ಪ್ರಪಂಚದಲ್ಲಿ ಇನ್ನೂ ಅಗ್ಗದ ಬೆಲೆಯಲ್ಲಿ ಚಿನ್ನ ಲಭ್ಯವಿರುವ ಅನೇಕ ದೇಶಗಳಿವೆ. ದುಬೈ ಹೊರತುಪಡಿಸಿ ಭಾರತಕ್ಕಿಂತ ಅಗ್ಗದ ಬೆಲೆಯಲ್ಲಿ ಚಿನ್ನ ಲಭ್ಯವಿರುವ 5 ದೇಶಗಳ ಬಗ್ಗೆ ತಿಳಿದುಕೊಳ್ಳೋಣ.

ದುಬೈ ಚಿನ್ನದ ರಾಜಧಾನಿಯಂತೆ ಹೆಸರುವಾಸಿಯಾದರೂ, 2025ರಲ್ಲಿ ಕೆಲವು ದೇಶಗಳಲ್ಲಿ 24 ಕ್ಯಾರಟ್ ಚಿನ್ನ ದುಬೈಗಿಂತಲೂ ಆಶ್ಚರ್ಯಕರವಾಗಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.

ಹೌದು, ಇದಕ್ಕೆ ಕಾರಣ ಕಡಿಮೆ ತೆರಿಗೆಗಳು, ಸ್ಥಳೀಯ ಉತ್ಪಾದನೆ, ಬಲಿಷ್ಠ ಕರೆನ್ಸಿ ಮತ್ತು ಜಾಗತಿಕ ಮಾರುಕಟ್ಟೆ ಸ್ಪರ್ಧೆ. ದುಬೈಯಲ್ಲಿ 10 ಗ್ರಾಂಗೆ 78,960 ಇದ್ದರೆ, ಈ ಕೆಳಗಿನ 5 ದೇಶಗಳಲ್ಲಿ ಅದರಿಂತ ಕಡಿಮೆ ಸಿಗುತ್ತದೆ (ಫೆಬ್ರುವರಿ 2025ರ ಬೆಲೆಗಳು, 10 ಗ್ರಾಂ 24ಕೆ ಚಿನ್ನಕ್ಕೆ ಭಾರತೀಯ ರೂಪಾಯಿಗಳಲ್ಲಿ).

1. ಅಮೆರಿಕಾ (USA)- 72,280 ರೂ.

2.ಆಸ್ಟ್ರೇಲಿಯಾ-73,580 ರೂ.

3.ಸಿಂಗಾಪುರ್- 77,110 ರೂ.

4.ಸ್ವಿಟ್ಜರ್ಲೆಂಡ್-78,660 ರೂ.

5. ಇಂಡೋನೇಷ್ಯಾ- 78,860

ಈ ಬೆಲೆಗಳು ಸ್ಪಾಟ್ ಬೆಲೆ, ತೆರಿಗೆಗಳು ಮತ್ತು ಮಾರುಕಟ್ಟೆ ಶುಲ್ಕಗಳನ್ನು ಸೇರಿಸಿ ಲೆಕ್ಕ ಹಾಕಲಾಗಿದೆ. ಖರೀದಿಯ ಮೊದಲು ಸ್ಥಳೀಯ ಮಾರುಕಟ್ಟೆಗಳಲ್ಲಿ (ಉದಾ: USAನಲ್ಲಿ COMEX ಮಾರುಕಟ್ಟೆ) ಪರಿಶೀಲಿಸಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net