ಮತ್ತೆ ಲಕ್ಷ ರೂ. ದಾಟಿದ ಚಿನ್ನ

5-684c6a73e5720
Published on

ನವದೆಹಲಿ: ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಪುನಃ ಸುರಕ್ಷಿತ ಹೂಡಿಕೆಯಾದ ಬಂಗಾರದತ್ತ ಮುಖ ಮಾಡಿದ್ದಾರೆ. ಪರಿಣಾಮವಾಗಿ, ಚಿನ್ನದ ಬೆಲೆ ಶುಕ್ರವಾರ ಒಮ್ಮೆಲೇ 2,200 ರೂ. ಏರಿಕೆಯಾಗಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನ 10 ಗ್ರಾಂಗೆ 1,01,540 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 1,900 ರೂ.ನಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 1,00,700 ರೂ. ಆಗಿದೆ.

ಏ. 22ರಂದು ಹಳದಿಲೋಹದ ಬೆಲೆ 1,800 ರೂ. ಏರಿಕೆಯಾಗಿ ಸಾರ್ವಕಾಲಿಕ ದಾಖಲೆಯಾದ 1,01,600 ರೂ.ಗೆ ತಲುಪಿತ್ತು. ಬೆಳ್ಳಿಯ ದರ ಶುಕ್ರವಾರ 1,100 ರೂ. ಏರಿಕೆಯಾಗಿದ್ದು, ಕೆಜಿಗೆ ಸಾರ್ವಕಾಲಿಕ ದಾಖಲೆಯಾದ 1,08,100 ರೂ.ಗೆ ಮುಟ್ಟಿದೆ. ಸೋಮವಾರವೂ ಬೆಳ್ಳಿ 1,000 ರೂ. ಏರಿಕೆಯಾಗಿ 1,08,100 ರೂ.ಗಳ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net