ಸಿಎಂ ಕಾರ್ಯಕ್ರಮದಲ್ಲೇ ಕಳ್ಳರ ಕೈ ಚಳಕ; ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆಯ ಚಿನ್ನದ ಸರ ಕಳವು..

Crime
Published on

ಬೆಳಗಾವಿ: ಸಾಮಾನ್ಯವಾಗಿ ಗರಿಷ್ಠ ಭದ್ರತೆ ಇರುವ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೇ ಕಳ್ಳರು ಕೈಚಳಕ ತೋರಿದ ಪ್ರಕರಣವೊಂದು ನಡೆದಿದೆ. ಅದರಲ್ಲೂ ರಾಜಕಾರಣಿಯೊಬ್ಬರೇ ಚಿನ್ನ ಕಳೆದುಕೊಂಡಂಥ ಪ್ರಕರಣ ಇದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗಾವಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಈ ಕಾರ್ಯಕ್ರಮದಲ್ಲೇ ಹಾಜರಿದ್ದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆಯ ಸರಕ್ಕೇ ಕಳ್ಳರು ಕೈ ಹಾಕಿದ್ದರು. ರಾಮದುರ್ಗ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತಾಬಾಯಿ ಬೊಮ್ಮಣ್ಣವರ ಸರ ಕಳೆದುಕೊಂಡವರು.

ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಇಂದು ಈ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಶಾಂತಾಬಾಯಿ ಕೂಡ ಪಾಲ್ಗೊಂಡಿದ್ದು, ಕಾರ್ಯಕ್ರಮದ ಬಳಿಕ ಸಿಎಂ ಬೊಮ್ಮಾಯಿ ಮರಳುವಾಗ ಉಂಟಾದ ಗದ್ದಲದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಪರಿಣಾಮವಾಗಿ, ಶಾಂತಾಬಾಯಿ ಅವರು 40 ಗ್ರಾಂ ತೂಕದ ಚಿನ್ನದ ಸರ ಕಳ್ಳತನಕ್ಕೆ ಒಳಗಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net