ಮಹಾಬಲೇಶ್ವರ ದೇವಸ್ಥಾನದ ಹೊರಗೂ ವಸ್ತ್ರ ಸಂಹಿತೆ ಜಾರಿ ಮಾಡಿದ ಮೇಲುಸ್ತುವಾರಿ ಸಮಿತಿ!

New Project
Published on

ಗೋಕರ್ಣ: ಈ ಹಿಂದೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ದೇವಸ್ಥಾನದ ಒಳಗೆ ವಸ್ತ್ರ ಸಂಹಿತೆ ಜಾರಿ ಮಾಡಿತ್ತು. ಈಗ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಬಳಿ ಅರೆಬರೆ ವಸ್ತ್ರ ಧರಿಸುವಂತಿಲ್ಲ ಎಂದು ಸಮಿತಿ ಆದೇಶ ಹೊರಡಿಸಿದೆ.

ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಯಾರೂ ಅರೆಬರೆ ಉಡುಪು ಧರಿಸುವಂತಿಲ್ಲ. ಎಲ್ಲಾದರು ತಪ್ಪಿದರೆ ಅಂಥವರ ಸಂಚಾರ ನಿಷೇಧ ಮಾಡಲಾಗುವುದು ಎಂದು ಸಮಿತಿ ಸೂಚನಾ ಫಲಕವನ್ನು ಅಳವಡಿಸಿದೆ. ಅದಷ್ಟೇ ಸಾಲುವುದಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲೂ ಸಮಿತಿ ಸೂಚನಾ ಫಲಕದ ಬ್ಯಾನರ್ ಅಳವಡಿಸಿದೆ. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಸೇರಿ ಎಂಟು ಜನರಿದ್ದಾರೆ.

ಈ ಸೂಚನಾ ಫಲಕಗಳನ್ನು ರಥ ಬೀದಿ, ಕಡಲ ತೀರ, ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಈಗ ದೇವಸ್ಥಾನ ಹೊರತುಪಡಿಸಿ ಸಾರ್ವಜನಿಕ ಪ್ರದೇಶದಲ್ಲೂ ವಸ್ತ್ರ ಸಂಹಿತೆ ಜಾರಿ ಮಾಡಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net