

ಮಂಗಳೂರು: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ವರ್ಷದ ಪರ್ವ ಕಾಲದ ಸಂಭ್ರಮದ ಅಂಗವಾಗಿ 2025 ಅ.18ರೊಳಗೆ 550ಕೋಟಿ ರಾಮ ನಾಮ ತಾರಕ ಮಂತ್ರ ಜಪಿಸುವ ಗುರಿ ಹೊಂದಲಾಗಿದೆ.
ಇದುವರೆಗೆ 34 ದಿನಗಳಲ್ಲಿ 80 ಲಕ್ಷ ರಾಮ ತಾರಕ ಮಂತ್ರ ಜಪ ಮಾಡಲಾಗಿದೆ. ಈ ಜಪವು ಪರಮ ಪೂಜ್ಯ ಗುರುವರ್ಯ ಶ್ರೀ ವಿದ್ಯಾಧೀಶ ವಡೇರ ಸಂಕಲ್ಪದಂತೆ 2024 ಏ.17ರ ರಾಮ ನವಮಿಯಂದು ಕರ್ನಾಟಕ, ಮುಂಬಯಿ ಸೇರಿದಂತೆ ಸಂಸ್ಥಾನದ ಎಲ್ಲಾ ಮಠಗಳ ಶಾಖೆಗಳಲ್ಲಿ ಆರಂಭಗೊಂಡಿದೆ. ಈ ಜಪ 2025 ಅ.18ರ ವರೆಗೆ ಮುಂದು ವರಿಯುತ್ತದೆ.
ಈ ಅಭಿಯಾನದ ಅಂಗವಾಗಿ ಮಂಗಳೂರು ರಥ ಬೀದಿಯ ಶ್ರೀ ಗೋಕರ್ಣ ಪರ್ಥಗಾಳಿ ಜೀವೋತ್ತಮ ಶಾಖಾ ಮಠದಲ್ಲಿ ಶ್ರೀ ರಾಮ ನವಮಿಯಂದು ಆರಂಭಗೊಂಡು ಮೂರು ನಾಲ್ಕು ಪಾಳಿಗಳಲ್ಲಿ ನಡೆಯುತ್ತದೆ. ಮೇ 19 ರಂದು 1580 ಜಪಕರು ಒಟ್ಟು 20.83 ಲಕ್ಷ ರಾಮನಾಮ ತಾರಕ ಮಂತ್ರ ಜಪ ಮಾಡಿದರು.
ಈ ಅಭಿಯಾನದಲ್ಲಿ ಕಾಸರಗೋಡು, ಕಾಂಞಗಾಡ್,ಪುತ್ತೂರು,ಉಳ್ಳಾಲ,ಸುರತ್ಕಲ್, ಗುರುಪುರ ಸೇರಿದಂತೆ ವೈದಿಕರು ಭಾಗವ ಹಿಸುವ ಮೂಲಕ ಉತ್ತಮ ಪ್ರತಿಕ್ರೀಯೆ ದೊರೆತಿದೆ. ಪ್ರತಿದಿನ ಸರಾಸರಿ 2.4 ಲಕ್ಷ ಜಪವನ್ನು ಮಾಡಲಾ ಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಯಿದೆ. ಒಂದೂವರೆ ಸಂವತ್ಸರದವರೆಗೆ ನಡೆಯುವ ಈ ಅಭಿಯಾನದಲ್ಲಿ ಸಮಾಜ ಬಾಂಧವರು ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವಂತೆ ಅಭಿಯಾನದ ಸಂಘಟಕರ ಪ್ರಕಟಣೆ ತಿಳಿಸಿದೆ.