ಹಬ್ಬದಂದೇ ನೈಟ್‌ ಕರ್ಫ್ಯೂ ಹಿಂಪಡೆದ ಸರ್ಕಾರ: ಇಂದು ರಾತ್ರಿ ದೀಪಾವಳಿ ಮತ್ತಷ್ಟು ಜಗಮಗ...

Vidhana Soudha vvani
Published on

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಪೆಟ್ರೋಲ್‌-ಡೀಸೆಲ್‌ ಬೆಲೆ ಇಳಿಕೆ ಮಾಡಿ ಸಾರ್ವಜನಿಕರನ್ನು ಖುಷಿ ಪಡಿಸಲು ಯತ್ನಿಸಿದ್ದ ರಾಜ್ಯ ಸರ್ಕಾರ ಈಗ  ಜನತೆಯ ಖುಷಿಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. ಮಾತ್ರವಲ್ಲ, ದೀಪಾವಳಿಯ ಈ ರಾತ್ರಿ ಮತ್ತಷ್ಟು ಜಗಮಗಿಸಲು ಅನುವು ಮಾಡಿಕೊಟ್ಟಿದೆ.

ಕರೊನಾ ಸೋಂಕು ನಿಯಂತ್ರಣ ಹಾಗೂ ತಡೆ ದೃಷ್ಟಿಯಿಂದ ಸುದೀರ್ಘ ಅವಧಿಯಿಂದ ಇದ್ದ ನೈಟ್‌ ಕರ್ಫ್ಯೂವನ್ನು ಸರ್ಕಾರ ಹಿಂಪಡೆದಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನೈಟ್‌ ಕರ್ಫ್ಯೂ ಆದೇಶವನ್ನು ಹಿಂಪಡೆದಿದೆ. ಆ ಮೂಲಕ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರ ವರೆಗೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

ನೈಟ್‌ ಕರ್ಫ್ಯೂ ಹಿಂಪಡೆಯುವ ಜೊತೆಗೆ ರಾಜ್ಯದಲ್ಲಿ ಕುದುರೆ ರೇಸ್‌ಗೂ ಸರ್ಕಾರ ಅನುವು ಮಾಡಿಕೊಟ್ಟಿದೆ. ಸ್ಥಳಾವಕಾಶದ ಸಾಮರ್ಥ್ಯದಷ್ಟು ಕುದುರೆಗಳಿಗೆ ಮಾತ್ರ ರೇಸ್ ಗೆ ಅನುಮತಿ ನೀಡಲಾಗುತ್ತಿದ್ದು, ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿ ಅನುಸರಿಸಿ ರೇಸ್‌ ನಡೆಸಬಹುದು ಎಂದು ಹೇಳಿದೆ. ಕರೊನಾ ನಿರ್ಬಂಧ ಹಿಂಪಡೆಯಲಾಗಿದ್ದರೂ ಕೋವಿಡ್‌-19 ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರ್ಕಾರ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net