ರೋಗಿಗಳಿಗೆ ದೇವರ ಅನುಗ್ರಹ ಮುಖ್ಯ: ಸ್ವಾಮೀಜಿ

swamiji
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಭಗವದ್ಗೀತೆ ಅಭಿಯಾನದ ಭಾಗವಾಗಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಸ್ಪತ್ರೆಯಲ್ಲಿದ್ದ ಜನರಿಗೆ ಭಗವದ್ಗೀತೆ ಪುಸ್ತಕಗಳನ್ನು ನೀಡಿದರು.
Published on

ಶಿವಮೊಗ್ಗ: ರೋಗಿಗಳು ಗುಣಮುಖವಾಗಲು ವೈದ್ಯರ ಪಾತ್ರ ಎಷ್ಟು ಮುಖ್ಯವೋ, ಭಗವಂತನ ಅನುಗ್ರಹವೂ ಬೇಕಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಭಗವದ್ಗೀತಾ ಅಭಿಯಾನದ ಅಂಗವಾಗಿ ನಗರದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಅಭಿಯಾನ ನಡೆಯುವ ಈ ಒಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆಗೆ ಬಂದು ಗುಣಮುಖರಾಗಿ ಹೋಗುವ ಎಲ್ಲರಿಗೂ ಆಸ್ಪತ್ರೆಯ ಸಿಬ್ಬಂದಿ ಭಗವದ್ಗೀತೆ ಪುಸ್ತಕಗಳನ್ನು ವಿತರಿಸುವಂತೆ ತಿಳಿಸಿದರು.

ಭಗವದ್ಗೀತೆಯ ಸಂದೇಶ ಎಲ್ಲರನ್ನೂ ತಲುಪಬೇಕು. ಅದೇ ರೀತಿ ಭಗವಂತನ ಅನುಗ್ರಹ ಎಲ್ಲರಿಗೂ ಲಭಿಸಿ ಆರೋಗ್ಯ ಹೊಂದಬೇಕು ಎಂದು ಆಶಿಸಿದರು. ತಜ್ಞ ವೈದ್ಯರಾದ ಡಾ. ವೆಂಕಟೇಶಮೂರ್ತಿ, ಡಾ. ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net