

ನವದೆಹಲಿ: ರಷ್ಯಾ-ಯೂಕ್ರೇನ್ ಯುದ್ಧದ ಕಾರಣ ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ತಲೆದೋರಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಭಿಪ್ರಾಯ ಪಟ್ಟಿದೆ. ವಿಶ್ವ ಅನಿಶ್ಚಿತತೆಯ ಸೂಚ್ಯಂಕದಲ್ಲಿ ಈ ವರ್ಷದ ಮೊದಲ ಮೂರು ತಿಂಗಳ ತ್ರೖೆಮಾಸಿಕದಲ್ಲಿನ ಜಾಗತಿಕ ಹಣಕಾಸು ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದು, 143 ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಕುಂಠಿತ ಕಂಡುಬಂದಿದೆ. ಇದರಿಂದ ಉತ್ಪಾದನೆಯಲ್ಲಿ ಕುಸಿತವಾಗಿರುವುದು ವೇದ್ಯ ಎಂದು ಐಎಂಎಫ್ ವಿಶ್ಲೇಷಿಸಿದೆ.
ಮೊದಲ ತ್ರೖೆಮಾಸಿಕದಲ್ಲಿನ ಆರ್ಥಿಕ ಹಿನ್ನಡೆಯ ಆಧಾರದಲ್ಲಿ ಹೇಳುವುದಾದರೆ ಪ್ರಸಕ್ತ ಹಣಕಾಸು ಸಾಲಿನಲ್ಲಿ ಶೇ. 0.35ರಷ್ಟು ಆರ್ಥಿಕ ಬೆಳವಣಿಕೆ ಇಳಿಕೆ ಆಗಲಿದೆ ಎಂದು ಐಎಂಎಫ್ ಹೇಳಿದೆ. ಕರೊನಾ ಸಾಂಕ್ರಾಮಿಕದಿಂದ ತೀವ್ರ ಹಿನ್ನೆಡೆ ಕಂಡಿದ್ದ ಜಾಗತಿಕ ಸರಬರಾಜು ಸರಪಳಿಯ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅದರ ಮೇಲೆ ಯೂಕ್ರೇನ್ ಸಂಘರ್ಷವು ವ್ಯಾಪಕ ಪರಿಣಾಮ ಬೀರಿದೆ. ಇಂಧನ ತೈಲ ಮತ್ತು ಇನ್ನಿತರ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಐಎಂಎಫ್ ಹೇಳಿದೆ.
ಮಾನವೀಯತೆಯನ್ನು ಮರೆತಿರುವ ರಷ್ಯಾ ಎಂಥ ನೀಚತನಕ್ಕೂ ಇಳಿಯುಲು ಹಿಂಜರಿಯು ವುದಿಲ್ಲ. ಅಣ್ವಸ್ತ್ರ ಬಳಕೆ ಮಾಡುವುದಕ್ಕೂ ಹೇಸುವುದಿಲ್ಲ. | ವೊಲೊದಿಮಿರ್ ಝೆಲೆನ್ಸ್ಕಿ ಯೂಕ್ರೇನ್ ಅಧ್ಯಕ್ಷ ವೈಮಾನಿಕ ದಾಳಿ ಯಲ್ಲಿ ಯೂಕ್ರೇನ್ನ ಶಸ್ತ್ರ ಸಜ್ಜಿತ ವಾಹಗಳ ತಯಾ ರಿಕಾ ಘಟಕ ಧ್ವಂಸಗೊಂಡಿದೆ. ಯೂಕ್ರೇನ್ ಸೇನಾ ನೆಲೆಗಳನ್ನು ನಾಶವಾಗಿದೆ. | ಇಗೋರ್ ಕೊನಾಶೆಂಕೋವ್ ರಷ್ಯಾ ರಕ್ಷಣಾ ಇಲಾಖೆ ವಕ್ತಾರ
ತ್ವರಿತವಾಗಿ ಶಸ್ತ್ರಾಸ್ತ್ರ ಕಳಿಸಿ: ಪ್ರಮುಖ ನಗರಗಳ ಮೇಲೆ ಮುಗಿಬಿದ್ದಿರುವ ರಷ್ಯಾ ಪಡೆ, ಉದ್ದೇಶ ಪೂರ್ವಕವಾಗಿಯೇ ನಾಗರಿಕರ ಮೇಲೆ ದಾಳಿ ಮುಂದುವರಿಸಿದೆ. ಸಾವಿರಾರು ಜನರು, ಯೋಧರನ್ನು ರಷ್ಯಾ ಒತ್ತೆಯಲ್ಲಿ ಇರಿಸಿಕೊಂಡಿದೆ. ಎರಡು ವಾರದಲ್ಲಿ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಶತ್ರುಗಳ ತೀವ್ರ ಹೊಡೆತವನ್ನು ಹಿಮ್ಮೆಟ್ಟಿಸಲು ನಮಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಶ್ಚಿಮದ ದೇಶಗಳು ತುರ್ತಾಗಿ ಪೂರೈಸಬೇಕು. ಆಗ ಮಾತ್ರ ಈ ನಮ್ಮ ನಗರಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮರಿಯುಪೋಲ್ನಲ್ಲಿ ರಷ್ಯಾ ರಕ್ಕಸತನವನ್ನು ತೋರಿದೆ. ಯುದ್ಧಾಪರಾಧ ಮಿತಿಮೀರಿದೆ. ಇಂಥ ದೇಶದ ಜತೆಗೆ ಶಾಂತಿ ಮಾತುಕತೆ ಮುಂದುವರಿಸುವುದರಲ್ಲಿ ಯಾವ ಅರ್ಥವಿದೆ ಎಂದು ಪ್ರಶ್ನಿಸಿದ್ದಾರೆ.
ಮರಿಯುಪೋಲ್ ರಷ್ಯಾ ವಶ: ಸಮರ ನೌಕೆ ನಾಶದ ನಂತರ ರಷ್ಯಾ ರೊಚ್ಚಿಗೆದಿದ್ದು, ರಾಜಧಾನಿ ಕಿಯೆವ್ ಸೇರಿ ಯೂಕ್ರೇನ್ ನಗರಗಳ ಮೇಲೆ ಶೆಲ್ ಮತ್ತು ಕ್ಷಿಪಣಿ ದಾಳಿ ತೀವ್ರಗೊಳಿಸಿದೆ. ಮರಿಯುಪೋಲ್ ರೇವು ನಗರ ವಶ ಪಡಿಸಿಕೊಂಡಿರುವುದಾಗಿ ರಷ್ಯಾ ಹೇಳಿದೆ. ರ್ಖಾವ್ ಅನ್ನು ರಷ್ಯಾ ಸೈನಿಕರು ನುಚ್ಚುನೂರು ಮಾಡುತ್ತಿದ್ದಾರೆ. ಈ ನಗರದಲ್ಲಿ ಐವರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಯೂಕ್ರೇನ್ ನಗರವಾಸಿಗಳು ಅತೀವವಾಗಿ ಆತಂಕಗೊಂಡಿದ್ದಾರೆ. ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ವಲಸೆ ಹೋಗಲು ಅವಕಾಶ ಇಲ್ಲದಂತೆ ದಾಳಿ ನಡೆಯುತ್ತಿದೆ. ಹೀಗಾಗಿ ರ್ಖಾವ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೊ, ಸುರಕ್ಷಿತ ಸ್ಥಳಗಳಿದ್ದರೆ ಅಡಗಿಕೊಳ್ಳಿ, ಊರನ್ನು ಬಿಡುವುದಿದ್ದರೆ ಜೋಪಾನವಾಗಿ ವಲಸೆ ಹೋಗಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನದೊಳಗೆ ಶಸ್ತ್ರ ಕೆಳಗಿಟ್ಟು ಶರಣಾಗಿ ಎಂದು ರಷ್ಯಾ ಅಂತಿಮ ಗಡುವುನ್ನು ಯೂಕ್ರೇನ್ಗೆ ನೀಡಿತ್ತು. ಆದರೆ, ಶರಣಾಗತಿಯ ಮಾತೇ ಇಲ್ಲ ಕಡೆ ಘಳಿಗೆಯವರೆಗೂ ಹೋರಾಟ ಮಾಡುವುದಾಗಿ ಯೂಕ್ರೇನ್ ಅಷ್ಟೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.