ಗ್ಲೋಬಲ್​ ಟೀಚರ್​ನ್ನೇ ಎಂಎಲ್​ಸಿ ಮಾಡ್ತಾರಂತೆ ಬಿಜೆಪಿಯವರು! ರಾಜ್ಯಪಾಲರ ಜತೆ ನಾವು ಮಾತಾಡ್ತೇವೆ ಎಂದ ನಾಯಕ

ranjith
Published on

ಮುಂಬೈ: ಮಹಾರಾಷ್ಟ್ರದ ಸೊಲ್ಲಾಪುರದ ಸರ್ಕಾರಿ ಶಾಲೆಯೊಂದರ ಶಿಕ್ಷಕ ರಂಜಿತ್ ಸಿಂಗ್ ಡಿಸಾಲೆ ಅವರು ಗ್ಲೋಬಲ್​ ಟೀಚರ್​ ಪ್ರಶಸ್ತಿಗೆ ಭಾಜೀನರಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಪಡೆದ ಬೆನ್ನಲ್ಲೇ ಇನ್ನೊಂದು ಅವಕಾಶ ರಂಜಿತ್​ ಅವರಿಗೆ ಒದಗಿಬಂದಿದೆ. ರಂಜಿತ್​ ಅವರನ್ನು ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಲು ಬಿಜೆಪಿ ಮುಂದಾಗಿದೆ.

ರಂಜಿತ್ ಸಿಂಗ್​ ಅವರನ್ನು ನಾಮನಿರ್ದೇಶಿತ ಎಂಎಲ್​ಸಿ ಮಾಡಲು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್​ ಪಾಟೀಲ್​ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​ ಅವರೊಂದಿಗೆ ಮಾತನಾಡುತ್ತೇವೆ. ನಂತರ ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ನಾಯಕ ದಾರೇಕರ್​ ತಿಳಿಸಿದ್ದಾರೆ. ಶನಿವಾರದಂದು ರಂಜಿತ್​ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ರಂಜಿತ್​ ಅವರನ್ನು ಪ್ರಶಂಸಿಸುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕ್ಯೂಆರ್​ ಕೋಡ್​ ಪಠ್ಯಪುಸ್ತಕಗಳಲ್ಲಿ ರಂಜಿತ್​ ಮಾಡಿರುವ ಸಾಧನೆ ಗುರುತಿಸಿ ಅವರಿಗೆ ಗ್ಲೋಬಲ್​ ಟೀಚರ್​ ಅವಾರ್ಡ್​ ನೀಡಲಾಗಿದೆ. ಪ್ರಶಸ್ತಿಯಾಗಿ 1 ಮಿಲಿಯನ್ ಅಮೆರಿಕನ್ ಡಾಲರ್ ನೀಡಲಾಗಿದೆ. ಈ ಹಣದಲ್ಲಿ ಅರ್ಧ ಭಾಗವನ್ನು ಫೈನಲ್ ನಲ್ಲಿದ್ದ ಇತರ 9 ಶಿಕ್ಷಕರಿಗೆ ಹಂಚುವ ಮೂಲಕ 31 ವರ್ಷದ ರಂಜಿತ್ ಸಿಂಗ್ ಡಿಸಾಲೆ ಉದಾರತೆ ಮೆರೆದಿದ್ದಾರೆ. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net