ತುಳಸಿ ಬೆಳೆಯಲು ಆದ್ಯತೆ ನೀಡಿ

9sri-3
ಶೃಂಗೇರಿಯಲ್ಲಿ ಬುಧವಾರ ಆಯೋಜಿಸಿದ್ದ ಡಾ.ಎಂ.ಹೆಚ್.ಮರಿಗೌಡ ಜನ್ಮದಿನಾಚರಣೆಯಲ್ಲಿ ನಿವೃತ್ತ ಸಹಾಯಕ ತೋಟಗಾರಿಕಾ ಅಧಿಕಾರಿ ಆರ್.ಎಂ.ಚೌವ್ಹಾಣ್ ಅವರನ್ನು ಗೌರವಿಸಲಾಯಿತು. ಡಾ.ಗಣೇಶ್, ಶ್ರೀನಿವಾಸ್, ಗೋಪಾಲಕೃಷ್ಣ, ಶ್ರೀಕೃಷ್ಣ ಇದ್ದರು.
Published on

ಶೃಂಗೇರಿ: ತುಳಸಿ ಎಲೆಗಳು ರೋಗನಿವಾರಣೆ ಮಾಡುವಲ್ಲಿ ಅಗ್ರಸ್ಥಾನ ಪಡೆದಿದ್ದು, ತಾಲೂಕಿನಲ್ಲಿ ತುಳಸಿ ಗಿಡಗಳನ್ನು ಬೆಳೆಸುವತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವ್ ಜಕಾತಿ ಮಠ್ ಹೇಳಿದರು.
ತೋಟಗಾರಿಕೆ ಇಲಾಖೆ, ಲಯನ್ಸ್ ಕ್ಲಬ್, ಭಾರತ ಸೇವಾದಳ ಹಾಗೂ ಆದರ್ಶ ರೈತ ಮಿತ್ರಕೂಟದ ಸಹಯೋಗದಲ್ಲಿ ಬುಧವಾರ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತುಳಸಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಜಿಂಕ್, ಕಬ್ಬಿಣಾಂಶವಿದ್ದು ನಗರದ ಮಾರುಕಟ್ಟೆಗಳಲ್ಲಿ ಬಹು ಬೇಡಿಕೆ ಇದೆ. ಆನೇಕ ಸೋಂಕುಗಳನ್ನು ದೂರ ಮಾಡುವ ತುಳಸಿಗೆ ಪವಿತ್ರ ಸ್ಥಾನವಿದೆ. ಕೃಷಿಕರು ಮಲ್ಲಿಗೆ ಬೆಳೆಸಿ ಅರ್ಥಿಕ ಸಬಲತೆ ಪಡೆಯಬಹುದು. ತುಳಸಿ ಹಾಗೂ ಮಲ್ಲಿಗೆ ಕೃಷಿಯನ್ನು ಬೆಳೆಸಲು ಖರ್ಚು ಕಡಿಮೆ.ಆದರೆ ಲಾಭ ಅಧಿಕ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಕೃಷ್ಣ , ಲಯನ್ಸ್ ಅಧ್ಯಕ್ಷ ವಿವೇಕ್ ಬೇಗಾನೆ, ನಿವೃತ್ತ ಸಹಾಯಕ ತೋಟಗಾರಿಕಾ ಅಧಿಕಾರಿ ಆರ್.ಎಂ.ಚೌವ್ಹಾಣ್ ಅವರನ್ನು ಗೌರವಿಸಲಾಯಿತು.
ಲಯನ್ಸ್ ಸಂಸ್ಥೆ ಪದಾಧಿಕಾರಿ ರಮೇಶ್ ಹೆಗಡೆ, ಆದರ್ಶ ರೈತ ಮಿತ್ರಕೂಟದ ಪ್ರತಿನಿಧಿ ಶ್ರೀ ಗೋಪಾಲಕೃಷ್ಣ ಕೆರೆಮನೆ, ಪಿಎಲ್.ಟಿ ಚ್ೀ ಟೆಕ್ನಿಕಲ್ ಆಫೀಸರ್ ಮೊಹಮದ್ ಆಶಿಕ್, ತೋಟಗಾರಿಕಾ ಸಹಾಯಕರು ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net