ಮೋದಿ ಮನೆಯಲ್ಲಿ ಮಹಿಳೆಯರಿಲ್ಲ, ಅವರಿಗೇ ಗ್ಯಾರಂಟಿ ಕಾರ್ಡ್ ಕೊಡಿ: ರಣದೀಪ್​ ಸುರ್ಜೆವಾಲಾ ವ್ಯಂಗ್ಯ

Modi
Published on

ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್​ಸಿಂಗ್​ ಸುರ್ಜೆವಾಲಾ ವ್ಯಂಗ್ಯ ಮಾಡಿದ್ದಾರೆ. ಈ ಮೂಲಕ ಅವರು ಮೋದಿ ಅಭಿಮಾನಿಗಳ ಆಕ್ಷೇಪಕ್ಕೆ ತುತ್ತಾಗುವ ಲಕ್ಷಣಗಳು ಗೋಚರಿಸಿವೆ.

ಬಾಗಲಕೋಟೆಯ ನವನಗರದಲ್ಲಿ ಇಂದು ಕಾಂಗ್ರೆಸ್​ ಕಚೇರಿಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನತಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗ್ಯಾರಂಟಿ ಕಾರ್ಡ್ ವಿಚಾರವಾಗಿ ಮಾತನಾಡುತ್ತ ಅವರು ಮೋದಿಯ ಕುರಿತು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷ ಘೋಷಿಸಿರುವ ಮನೆಯ ಯಜಮಾನತಿಗೆ ರೂ. 2000, ಗ್ಯಾಸ್​ಗೆ ರೂ. 500, 200 ಯೂನಿಟ್ ವಿದ್ಯುತ್ ಉಚಿತ ಮುಂತಾದ ಭರವಸೆಗಳ ಗ್ಯಾರಂಟಿ ಕಾರ್ಡ್ ಕುರಿತು ಸುರ್ಜೆವಾಲಾ ಮಾಹಿತಿ ನೀಡಿದ‌ ಬಳಿಕ, ಮನೆಯಲ್ಲಿ ಮಹಿಳೆಯೇ ಇರದಿದ್ದರೆ ಎಂದು ಕಾರ್ಯಕರ್ತರು ಪ್ರಶ್ನೆ ಕೇಳಿದ್ದರು.

ಆಗ ಮನೆಯಲ್ಲಿ ತಾಯಿ, ಧರ್ಮಪತ್ನಿ, ಮಗಳು, ತಂಗಿ ಇಲ್ಲದಂಥ ಕುಟುಂಬ ಲಕ್ಷಕ್ಕೆ ಒಂದು. ಅಂಥ ಮನೆಯಲ್ಲಿ ಮನೆಯ ಮುಖ್ಯಸ್ಥನಿಗೆ ಗ್ಯಾರಂಟಿ ಕಾರ್ಡ್ ಕೊಡಿ, ರಿಜಿಸ್ಟರ್ ಮಾಡಿಸಿ ಎಂದ ಸುರ್ಜೆವಾಲಾ, ಮೋದಿ ಅವರ ಮನೆಯಲ್ಲಿ ಮಹಿಳೆಯರಿಲ್ಲ, ಹಾಗಾಗಿ ಅವರಿಗೇ ಗ್ಯಾರಂಟಿ ಕಾರ್ಡ್ ಕೊಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net