ಶೌಚಗುಂಡಿ ಬಿದ್ದ ಬಾಲಕಿಯರು ಸ್ವಲ್ಪದರಲ್ಲೇ ಪಾರು

B. Biranahalli Govt School toilet
ಬಿ.ಬೀರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡ ಶೌಚ ಗುಂಡಿ.
Published on

ಶಿವಮೊಗ್ಗ: ತಾಲೂಕಿನ ಬಿ.ಬೀರನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆಯೇ ಮಂಜೂರಾಗಿದ್ದ ಹೈಟೆಕ್ ಶೌಚಗೃಹದ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಶನಿವಾರ ಶಾಲೆಯ ಬಾಲಕಿಯರಿಬ್ಬರು ಶೌಚಗುಂಡಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಶಾಲೆಯ ಆವರಣದಲ್ಲೇ ಕೆ.ಬಿ.ಅಶೋಕನಾಯ್ಕ ಶಾಸಕರಾಗಿದ್ದಾಗ ಅವರ ಅನುದಾನದಲ್ಲಿ ಶೌಚಗೃಹ ಮಂಜೂರಾಗಿತ್ತು. ಅದನ್ನು ಜಗ್ಗು ಎಂಬುವರು ಗುತ್ತಿಗೆ ಪಡೆದು, ಆನಂತರ ಮತ್ತೊಬ್ಬರಿಗೆ ಉಪ ಗುತ್ತಿಗೆ ನೀಡಿದ್ದರು. ಆದರೆ ಅರ್ಧಂಬರ್ಧ ಶೌಚಗುಂಡಿ ತೆಗೆದಿದ್ದು ಶನಿವಾರ ಶೌಚಗೃಹದ ಗುಂಡಿಗೆ ಆಯತಪ್ಪಿ ಬಿದ್ದಿದ್ದರು.
ತಕ್ಷಣವೇ ಶಾಲೆ ಸಮೀಪದಲ್ಲೇ ಸಾರ್ವಜನಿಕರು ಇಬ್ಬರನ್ನೂ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಶೌಚಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ಅನಾಹುತ ಸಂಭವಿಸುವುದರಲ್ಲಿತ್ತು. ಆದರೆ ಗ್ರಾಮಸ್ಥರು ಬಾಲಕಿಯರನ್ನು ರಕ್ಷಿಸಿ ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.
ತಕ್ಷಣವೇ ಶೌಚ ಗೃಹ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಬಿ.ಬೀರನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net