ಅಡುಗೆಮನೆಯಲ್ಲಿ ಶುರುವಾದ ವಾಗ್ವಾದ; ಪ್ರಿಯಕರನನ್ನು ಚುಚ್ಚಿ ಕೊಂದ ಪ್ರಿಯತಮೆ

Crime
Published on

ಪುಣೆ: ಅಡುಗೆ ಮನೆಯಲ್ಲಿ ಪ್ರೇಮಿಗಳ ನಡುವೆ ಶುರುವಾದ ವಾಗ್ವಾದವು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಮಹಾರಾಷ್ಟ್ರದ ಪುಣೆಯ ವಾಘೋಲಿ ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಯಶವಂತ್​​ ಮುಂಡೆ(22) ಎಂದು ಗುರುತಿಸಲಾಗಿದ್ದು ಗಾಯಗೊಂಡಿರುವ ಆರೋಪಿ ಆಕಾಂಕ್ಷ ಪನ್ಹಾಲೆ(21)ಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಲೋಣಿಕಂಡ್​ ಪೊಲೀಸ್​ ಠಾಣಾಧಿಕಾರಿ ಗಜಾನನ ಪವಾರ್​ ಮೃತ ಯಶವಂತ್​ ಹಾಗೂ ಆರೋಪಿ ಆಕಾಂಕ್ಷ ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಪರೀಕ್ಷೆ ಇದ್ದ ಕಾರಣ ಪ್ರಿಯಕರಣ ರೂಮಿಗೆ ಪ್ರೇಯಸಿ ಓದಿಕೊಳ್ಳಲು ಬಂದಿದ್ದಾಳೆ.

Mumbai Police

ಸೋಮವಾರ ಬೆಳಗಿನ ಜಾವ ಇಬ್ಬರ ನಡುವೆ ವಿಚಾರ ಒಂದಕ್ಕೆ ವಾಗ್ವಾದ ಶುರುವಾಗಿದ್ದು ಈ ವೇಳ ಆಕಾಂಕ್ಷ ಯಶವಂತ್​ಗೆ ಚಾಕುವಿನಿಂದ ಇರಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಪ್ರಿಯಕರನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಕಾಂಕ್ಷಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗುಣಮುಖಳಾದ ನಂತರ ವಿಚಾರಣೆಗೆ ಒಳಪಡಿಸಲಾಗುವುದುಎ ಎಂದು ಲೋಣಿಕಂಡ್​ ಪೊಲೀಸ್​ ಠಾಣಾಧಿಕಾರಿ ಗಜಾನನ ಪವಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net