ಪ್ರಿಯಕರನನ್ನು ಮನೆಗೆ ಕರೆದು ಕೊಂದ ಗೆಳತಿ! ಏನಿದು ಘಟನೆ? | Girlfriend

Untitled design - 2025-07-31T125926.020
Published on

Girlfriend: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿದ್ದು, ಇದರಿಂದ ದಾಂಪತ್ಯಗಳು ಜೀವನಗಳು ಹಾಳಾಗುತ್ತಿವೆ. ಈ ಅನೈತಿಕ ಸಂಬಂಧಗಳು ಸಾವಿನ ಮನೆ ತೋರಿಸುತ್ತಿವೆ. ಇದೀಗ ಈತರಹದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ತನ್ನ ಪ್ರಿಯಕರನ್ನು ಮನೆಗೆ ಕರೆಯಿಸಿ ಆಕೆಯೇ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ತರುಣ್ ತೇಜ್​ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇತನ ಗೆಳತಿ, ಆರೋಪಿ ಮಾಧವಿಯನ್ನು ಬಂಧಿಸಿದ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ನಡೆದ ಘಟನೆ ಏನು?

ತರುಣ್ ​ತೇಜ್​ ಎಂಬ ವ್ಯಕ್ತಿ ಪ್ರವಾಳಿಕಳನ್ನು ಮದುವೆಯಾಗಿ 2 ಮಕ್ಕಳನ್ನು ಹೊಂದಿದ್ದ. ಆದರೆ, ತರುಣ್​ ತೇಜ್​​ ಮಾಧವಿ ಎಂಬುವಳ ಜತೆ ವಿವಾಹೇತರ ಸಂಬಂಧ ಹೊಂದಿದ್ದ. ಎಂದಿನಂತೆ ತರುಣ್​ ತೇಜ್ ನನ್ನು​ ತನ್ನ ಗೆಳತಿ ಮಾಧವಿ ಮನೆಗೆ ಬಾ ಎಂದು ಹೇಳಿದ್ದಳು. ಮನೆಗೆ ಹೋಗಿದ್ದ ಆತ ಶವವಾಗಿ ಪತ್ತೆಯಾಗಿದ್ದ. ಮಾಧವಿ ಮತ್ತೊಬ್ಬ ಗೆಳಯನ ಜತೆ ಸೇರಿ ತರುಣ್​ನ್ನನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದಾಳೆ. ಆಕೆಯೇ ಕೊಲೆ ಮಾಡಿದ್ದಾಳೆ ಎಂದು ಮೃತ ತರುಣ್​ ತೇಜ್ ಕುಟುಂಬ ಆರೋಪಿಸಿದೆ. ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾಳೆ ಎಂಬುದು ತಿಳಿಯದು. ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net