ತಂಗಿಯನ್ನು ಗರ್ಭಿಣಿ ಮಾಡಿದ ಅಣ್ಣ; ಕೂಡ್ಲಿಗಿಯಲ್ಲೊಂದು ಅಸಹ್ಯ ಘಟನೆ

rape
Published on

ಬಳ್ಳಾರಿ: ತಂಗಿಯನ್ನು ಉಳಿದವರಿಂದ ರಕ್ಷಿಸಬೇಕಾದ ಸಹೋದರನೇ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ ಘಟನೆ ಕೂಡ್ಲಿಗಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಕಾಮುಕ ಅಣ್ಣನ ಕರ್ಮಕಾಂಡ ಬಯಲಿಗೆ ಬಂದಿದ್ದು ಆತನ ತಂಗಿ, ಅಪ್ರಾಪ್ತೆ ಗರ್ಭಿಣಿಯಾದಾಗ. ಅಣ್ಣನಿಂದ ಅತ್ಯಾಚಾರ ನಡೆಯುತ್ತಿದೆ ಎಂಬುದನ್ನು ಬಾಲಕಿ ಯಾರಿಗೂ ಹೇಳಿರಲಿಲ್ಲ. ಆದರೆ ಒಂದು ದಿನ ತೀವ್ರ ಹೊಟ್ಟೆನೋವು ಶುರುವಾಯಿತು. ಆಗ ಪರಿಶೀಲಿಸಿದ ವೈದ್ಯರು ಆಕೆ ಗರ್ಭಿಣಿ ಎಂಬ ಬೆಚ್ಚಿಬೀಳಿಸುವ ಸತ್ಯ ಹೇಳಿದ್ದಾರೆ.

ಬಾಲಕಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಿ, ಸದ್ಯ ಬಾಲಮಂದಿರಲ್ಲಿ ಇಡಲಾಗಿದೆ. ಕೂಡ್ಲಿಗಿಯ ಸಿಡಿಪಿಒ ಪೊಲೀಸರಿಗೆ ದೂರು ನೀಡಿದ್ದಾರೆ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net