

ಹಾವೇರಿ: ಬೀದಿ ನಾಯಿಗಳ ಅಟ್ಯಾಕ್ ನಿಂದಾಗಿ 9 ವರ್ಷದ ಬಾಲಕಿ ಬೆಚ್ಚಿ ಬಿದ್ದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಇಲ್ಲಿಯ ವಿದ್ಯಾನಗರ ಪೂರ್ವ ಭಾಗದ ಖಾಸಗಿ ಶೋರೂಮ್ ಹಿಂಭಾಗದ ಏರಿಯಾದಲ್ಲಿ ಈ ಘಟನೆ ನಡೆದಿದೆ.
ಶ್ರೇಯಾ ಬಿ. (9) ವರ್ಷದ ಬಾಲಕಿ ಮನೆಯಿಂದ ಹೊರಗಡೆ ಬರುವಾಗ ರಸ್ತೆಯಲ್ಲಿ ನಿಂತಿದ್ದ ಎರಡು ಬೀದಿ ನಾಯಿಗಳು ದಾಳಿ ನಡೆಸಿವೆ. ಬಾಲಕಿ ಚೀರಿದ ಕೂಡಲೇ ನಾಯಿಗಳು ಓಡಿ ಹೋಗಿದ್ದು, ದುರದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಾಯಿಗಳು ದಾಳಿ ಮಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾ ಸೆರೆಯಾಗಿದೆ.