

ಚೀನಾ: ಮಾಂಸಹಾರಿಗಳು, ಸಸ್ಯಹಾರಿಗಳು ಹಾಗೂ ಮಿಶ್ರಹಾರಿಗಳು ಇದ್ದಾರೆ. ಆಹಾರ ಅವರ ಆಯ್ಕೆಗೆ ಬಿಟ್ಟಿದ್ದು, ಸಾಮಾನ್ಯವಾಗಿ ಹೆಚ್ಚಿನವರು ಚಿಕನ್, ಮಟನ್ ಮತ್ತು ಮೀನುಗಳನ್ನು ಮಾತ್ರ ತಿನ್ನುತ್ತಾರೆ. ಕೆಲವರು ಹಾವು, ಚೇಳು, ಕ್ರಿಮಿಕೀಟಗಳನ್ನು ಹಲವು ಪ್ರದೇಶಗಳಲ್ಲಿ ಬೇಯಿಸಿ ತಿನ್ನುತ್ತಾರೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಹುಡುಗಿಯೊಬ್ಬಳು ಜಿರಳೆ ತಿನ್ನುತ್ತಿದ್ದಾಳೆ. ಟೊಮ್ಯಾಟೋ-ಮೆಣಸಿನಕಾಯಿ ಚಟ್ನಿಯೊಂದಿಗೆ ಜಿರಳೆಗಳನ್ನು ತಿನ್ನುತ್ತಾಳೆ. ಹುಡುಗಿ ಮೊದಲು ಬಹಳಷ್ಟು ಜಿರಳೆಗಳನ್ನು ಎಣ್ಣೆಯಲ್ಲಿ ಹುರಿದು ನಂತರ ತಟ್ಟೆಯಲ್ಲಿ ಬಡಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಎರಡು ಮೂರು ಜಿರಳೆಗಳನ್ನು ಆರಿಸಿ ಕೆಂಪು ಚಟ್ನಿಯಲ್ಲಿ ಚೆನ್ನಾಗಿ ಅದ್ದಿ ಸವಿಯುತ್ತಾ ತಿಂದಳು.
ಈ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫೇವರಿಟ್‌ವೈಲ್ಡ್ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು. 4 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ವೀಡಿಯೊವನ್ನು ವೀಕ್ಷಿಸಿದ ನೆಟ್ಟಿಗರು ವಿಭಿನ್ನ ಕಾಮೆಂಟ್ಗಳನ್ನು ಮಾಡಿದ್ದಾರೆ. ‘ನನ್ನ ಮನೆಯಲ್ಲಿ ಸಾಕಷ್ಟು ಜಿರಳೆಗಳಿವೆ. ಅವುಗಳನ್ನು ತೆಗೆದುಕೊಂಡು ಹುರಿದು ತಿನ್ನಿರಿ'. ಈ ದೃಶ್ಯ ಯಾರಿಗಾದರೂ ವಾಂತಿ ಬರುವಂತೆ ಮಾಡುತ್ತದೆ ಎಂದಿದ್ದಾರೆ.