ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ ಯುವತಿ ಸಾವು: ಐವರ ರಕ್ಷಣೆ, ಓರ್ವಳ ಸ್ಥಿತಿ ಗಂಭೀರ

Girl
Published on

ಮಂಗಳೂರು: ದೋಣಿ ದುರಂತದಲ್ಲಿ ಓರ್ವ ಯುವತಿ ನೀರುಪಾಲಾಗಿರುವ ಘಟನೆ ಭಾನುವಾರ ಸಂಜೆ ಉಳ್ಳಾಲ ಬಳಿಯ ನೇತ್ರಾವತಿ ನದಿಯಲ್ಲಿ ಸಂಭವಿಸಿದೆ. ಐವರು ಯುವತಿಯರನ್ನು ರಕ್ಷಿಸಲಾಗಿದ್ದು, ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.

ಮಂಗಳೂರಿನ ಮೀಯಪದವು ನಿವಾಸಿ ರೆನಿಟಾ(18) ಮೃತ ಯುವತಿ. ಘಟನೆಯಲ್ಲಿ ಐವರು ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಗುಲ್ಬರ್ಗ ನಿವಾಸಿ ಕಾವ್ಯ (20) ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೊಕ್ಕೊಟ್ಟು ಚರ್ಚ್​ನ ವಾರ್ಷಿಕೋತ್ಸವಕ್ಕೆ ಉಳ್ಳಾಲ ಬಳಿಯ ಉಳಿಯ ನಿವಾಸಿ ಜಾರ್ಜ್ ಎಂಬವರ ಮನೆಗೆ 6 ಯುವತಿಯರು ಬಂದಿದ್ದರು. ಹಿಂದಿರುಗುವಾಗ ದೋಣಿ ಮಗುಚಿ ದುರಂತ ಸಂಭವಿಸಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net