

ನವದೆಹಲಿ: ಪ್ರತಿಯೊಬ್ಬ ನಾಗರಿಕನಿಗೂ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಟ ಜ್ಞಾನ ಇರಬೇಕು. ಇಲ್ಲದೆ ಹೋದಲ್ಲಿ ಸಾವರ್ಜನಿಕ ಟೀಕೆಗೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ಜನ ಸಂಚಾರ ಹೆಚ್ಚಿರುವಂತಹ ಮೆಟ್ರೋ ರೈಲಿನಲ್ಲಿ ಸಭ್ಯತೆಯಿಂದ ವರ್ತಿಸುವುದು ಪ್ರತಿಯೊಬ್ಬ ಪ್ರಯಾಣಿಕ ಕರ್ತವ್ಯ. ಕಾರಣ ಹಿರಿಯರು, ಮಕ್ಕಳು ಸಹಪ್ರಯಾಣಿಕರಾಗಿರುತ್ತಾರೆ.
ಇದೀಗ ಯುವತಿಯೊಬ್ಬಳು ಅಶ್ಲೀಲವಾಗಿ ಕಾಣಿಸಿಕೊಂಡು ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾಳೆ. ಯುವತಿ ಮಿನಿ ಸ್ಕರ್ಟ್ ಧರಿಸಿ ಪ್ರಯಾಣಿಸಿತ್ತಿರುವುದನ್ನು ಸಹ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
ಕೆಲ ಟ್ವಿಟರ್ ಬಳಕೆದಾರರು ಕಮೆಂಟ್ ಮಾಡುತ್ತಾ, ಇದು ದೆಹಲಿ ಮೆಟ್ರೋದಲ್ಲಾ ಎಂದು ಆಶ್ಚರ್ಯ ಪಟ್ಟಿದ್ದಾರೆ. ಚಿತ್ರ ವಿಚಿತ್ರ ಶೈಲಿಯ ಉಡುಗೆ ತೊಟ್ಟು ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಪ್ರಭಾವಕ್ಕೆ ಈಕೆ ಒಳಗಾಗಿದ್ದಾಳೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)