

ಹಾವೇರಿ: ಭರತ ಖಂಡದಲ್ಲಿ ಜೈನ ಧರ್ಮ ಪುರಾತನ ಹಾಗೂ ಪವಿತ್ರವು ಆಗಿದ್ದು ಶಾಂತಿ ಮತ್ತು ಅಹಿಂಸೆ ಇದರ ಉದ್ದೇಶವಾಗಿದೆ. ಇಂತಹ ಜೈನ ಧರ್ಮ ಹಾಗೂ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಗಿರೀಶ ಮಟ್ಟಣ್ಣನವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ದಿಗಂಬರ ಜೈನ ಸಮಾಜದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾಹದ ಅಧ್ಯಕ್ಷ ಮಂಜಪ್ಪ ತಡಸದ ಮಾತನಾಡಿ, ಜೈನ ಧರ್ಮ ಶಾಂತಿ ಮತ್ತು ಅಹಿಂಸಾ ತತ್ವಗಳನ್ನು ಪುರಾತನ ಕಾಲದಿಂದಲೂ ತೀರ್ಥಂಕರು ಪಾಲಿಸುತ್ತಿದ್ದು ಅದನ್ನೇ ಈಗಲು ಪಾಲಿಸುತ್ತಿದೆ. ಆದರೆ, ಗಿರೀಶ ಮಟ್ಟಣ್ಣನವರ ಜೈನ್ ಧರ್ಮವನ್ನು ಹಿಂಸಾ ಧರ್ಮ ಹಿಂದೂ ರಾಜರುಗಳನ್ನು ಜೈನ್ ಧರ್ಮಕ್ಕೆ ಮತಾಂತರಿಸಿದ್ದಾರೆ. ಅಧಿಕಾರಕ್ಕಾಗಿ ಬ್ರಿಟಿಷರ ಕಾಲನ್ನ ನೆಕ್ಕಿ ಅಧಿಕಾರ ಪಡೆದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಆರೋಪ ಮಾಡಿದ್ದಾನೆ. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಾಜದ ಪ್ರಮುಖರಾದ ಭರತರಾಜ ಹಜಾರಿ, ಶಿವರಾಯಪ್ಪ ಅಪ್ಪಣ್ಣನವರ, ವಿಜಯಕುಮಾರ ಸಾತಗೊಂಡ, ಸುಧೀರ ಚಲ್ಸಿ, ಶಶಿಧರ ಗೌಡ್ರ, ರಮೇಶ ಕಳಸೂರ, ಶಿವಣ್ಣ ಜಾನಣ್ಣನವರ, ಪದ್ಮರಾಜ ಕಳಸೂರ, ಭರತೇಶ ಜಗಣ್ಣನವರ, ಪ್ರಶಾಂತ ಹೋಳಗಿ, ಸುರೇಶ ಹಂಚಿನಮನಿ, ಶ್ರೀಧರ ವರೂರ, ಶಂಕ್ರಪ್ಪ ದುಂಡಣ್ಣನವರ ಮತ್ತಿತರರು ಇದ್ದರು.