

ರಾಣೆಬೆನ್ನೂರ: ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವುದರಿಂದ ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲು ಸಹಕಾರವಾಗುತ್ತದೆ ಎಂದು ಆವರಗೊಳ್ಳದ ಓಂಕಾರ ಶಿವಾಚಾರ್ಯರು ಹೇಳಿದರು.
ನಗರದ ದೊಡ್ಡಪೇಟೆ ಹಿರೇಮಠದ ಜಗದ್ಗುರು ಪಂಚಾಚಾರ್ಯ ಮಂಗಲ ಮಂದಿರದಲ್ಲಿ ವೀರಶೈವ ಲಿಂಗವಂತ ನೌಕರರ ವೇದಿಕೆ ಹಾಗೂ ಲಿಂಗವಂತ ವಧು-ವರರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಮನುಷ್ಯ ತನ್ನ ಗಳಿಕೆಯಲ್ಲಿ ತ್ಯಾಗ ಮತ್ತು ದಾನ ಮಾಡುವುದರಿಂದ ಸಮಾಜದ ಏಳಿಗೆಗೆ ಪೂರಕವಾಗುತ್ತದೆ ಎಂದರು.
ಪ್ರಮುಖರಾದ ರವಿ ಪಾಟೀಲ, ಬಸವರಾಜ ಧೂಳೆಹೊಳಿ, ಎಸ್.ಸಿ. ಷಡಾಕ್ಷ್ಷರಿಮಠ, ವಿ.ಜಿ. ನೀರಲಗಿಮಠ, ಎನ್.ಎಚ್. ಕರೇಗೌಡ್ರ, ಬಿ.ಎಚ್. ಉಮ್ಮನಗೌಡ್ರ, ಶಿವಯೋಗಿ ಹಿರೇಮಠ, ಎಫ್.ಎ. ಬಸ್ಮಾಂಗಿಮಠ, ರಾಜು ಹರವಿಶೆಟ್ಟರ, ಶಂಭು ಕಟಗಿಹಳ್ಳಿ, ಎಂ.ಕೆ. ಸಾಲಿಮಠ, ರಾಜಜಶೇಖರ ಬೆಳವಿಗಿಮಠ ಮತ್ತಿತರರು ಉಪಸ್ಥಿತರಿದ್ದರು.