

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಇದು ವಿಶ್ವದ ಅತಿದೊಡ್ಡ ದೋಸೆಯೇ?' ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ, ಈ ದೋಸೆ ತನ್ನ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಮಲೇಶಿಯನ್ ರೆಸ್ಟೋರೆಂಟ್‌ನಲ್ಲಿ ಬಡಿಸಿದ ದೈತ್ಯ ದೋಸೆ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ, ರೆಸ್ಟೋರೆಂಟ್‌ನಲ್ಲಿ ವೇಟರ್‌ಗಳು ದೊಡ್ಡ ದೋಸೆಗಳನ್ನು ತರುತ್ತಿರುವುದು ಕಂಡುಬಂದಿದೆ. ಈ ದೋಸೆಯನ್ನು ರೆಸ್ಟೊರೆಂಟ್‌ನಲ್ಲಿನ ಪ್ರತಿಯೊಂದು ಮೇಜಿನ ಮೇಲೂ ಬಡಿಸಲಾಗುತ್ತದೆ. ಈ ದೋಸೆಗೆ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಷ್ಟು ದೊಡ್ಡ ದೋಸೆಯನ್ನು ನೋಡಿ ಹಲವರು ಆಶ್ಚರ್ಯ ಪಡುತ್ತಾರೆ. ಈ ವೀಡಿಯೋಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ದೋಸೆಯನ್ನು ನೋಡಿದ ಕೆಲವು ಗ್ರಾಹಕರು ಚೆನ್ನೈಗೆ ಬಂದು ನೋಡಿ, ನಿಮಗೆ ಇನ್ನೂ ದೊಡ್ಡ ದೋಸೆಗಳು ಸಿಗುತ್ತವೆ. ತಮಿಳುನಾಡಿಗೆ ಬನ್ನಿ, ಇನ್ನೂ ದೊಡ್ಡ ದೋಸೆ ತೋರಿಸುತ್ತೇವೆ' ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ದೋಸೆ ಮಲೇಶಿಯನ್ ರೆಸ್ಟೋರೆಂಟ್‌ನಲ್ಲಿ ಬಡಿಸಿದ ದೈತ್ಯ ದೋಸೆ ಎನ್ನಲಾಗಿದೆ.