ಅಭಿಷೇಕ್​ ಬಚ್ಚನ್​ ನಟನೆಯ 'ಘೂಮರ್' ಚಿತ್ರದ ಫಸ್ಟ್ ಲುಕ್ ರಿಲೀಸ್​!

Untitled design - 2023-07-31T203629.652
Published on

ಮುಂಬೈ: 'ಲಸ್ಟ್ ಸ್ಟೋರೀಸ್ 2' ಖ್ಯಾತಿಯ ನಿರ್ದೇಶಕ ಆರ್. ಬಾಲ್ಕಿ ಅವರ ಮುಂದಿನ ಕ್ರೀಡಾ ಜಾನರ್​ 'ಘೂಮರ್'​ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​​ ಇದೀಗ ಅಧಿಕೃತವಾಗಿ ಅನಾವರಣಗೊಂಡಿದೆ.

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ಚುಪ್‌' ಚಿತ್ರಕ್ಕೆ ಹೆಸರುವಾಸಿಯಾದ ನಿರ್ದೇಶಕ ಆರ್. ಬಾಲ್ಕಿ ಅವರು ಇದೀಗ ಅಭಿಷೇಕ್ ಬಚ್ಚನ್ ಮತ್ತು ಸೈಯಾಮಿ ಖೇರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಕ್ರೀಡಾ ಆಧರಿತ ಘೂಮರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದ ಮೂಲಕ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ.

'ಘೂಮರ್' ಚಿತ್ರ ಆಗಸ್ಟ್ 18, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈ ಬಗ್ಗೆ ಚಿತ್ರದ ನಿರ್ಮಾಪಕರು ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಇನ್ನು ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಅಂಗದ್ ಬೇಡಿ, ಶಬಾನಾ ಅಜ್ಮಿ ಸೇರಿದಂತೆ ಪ್ರತಿಭಾವಂತ ನಟರು ಅಭಿನಯಿಸಿದ್ದಾರೆ. ಸಿನಿಮಾಗೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net