VIDEO| ಮನಬಂದಂತೆ ವ್ಯಕ್ತಿಗೆ ಥಳಿಸಿ, ಬೂಟುಗಾಲಲ್ಲಿ ಒದ್ದ ಕಾನ್​ಸ್ಟೆಬಲ್​..!

U p police
Published on

ಗಾಜಿಯಾಬಾದ್​​: ಹಾಡುಹಗಲೇ ಪೊಲೀಸ್​ ಕಾನ್​​ಸ್ಟೇಬಲ್​ನೊಬ್ಬ ಯುವಕನನ್ನು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ರಿಂಕು ರಾಜೋರಾ ಎಂದು ಗುರುತಿಸಲಾದ ಪೋಲೀಸ್ ಕಾನ್​ಸ್ಟೇಬಲ್​ ಯುವಕನನ್ನು ಉಗ್ರವಾಗಿ ಥಳಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ದೃಶ್ಯಗಳಲ್ಲಿ ಕಾನ್ಸ್‌ಟೇಬಲ್ ವ್ಯಕ್ತಿಯನ್ನು ನೆಲದ ಬಿಳಿಸಿ ಮನಬಂದಂತೆ ಥಳಿಸುವುದರೆ ಜತೆಗೆ ಬೂಟುಗಾಲಿನಲ್ಲೇ ಆತನಿಗೆ ಒದ್ದಿದ್ದಾನೆ. ಸ್ಥಳೀಯರ ಸಮ್ಮುಖದಲ್ಲಿ ಘಟನೆ ನಡೆದರೂ ಯಾರೊಬ್ಬರೂ ಹಲ್ಲೆಯನ್ನು ತಡೆಯಲು ಮುಂದಾಗಲಿಲ್ಲ. ಪೊಲೀಸ್​ನ ಈ ಕೃತ್ಯಕ್ಕೆ ಮಕ್ಕಳು ಮತ್ತು ಯುವಕರು ಸಹ ಸಾಕ್ಷಿಯಾಗಿದ್ದರು.

TW: Violence


ವಿಡಿಯೋ ವೈರಲ್ ಆಗುತ್ತಿದ್ದಂತೆ ಇಲಾಖಾ ವಿಚಾರಣೆ ನಡೆಸಿ ರಿಂಕುರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲ್ಲೆ ಹಾಗೂ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಘಟನೆ ಕುರಿತು ಎಸಿಪಿ ಶ್ರೀವಾಸ್ತವ್ ಮಾತನಾಡಿದ್ದು, ಕಾನ್‌ಸ್ಟೆಬಲ್ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾನತುಗೊಳಿಸಲಾಗಿದೆ. ವಾಸ್ತವವಾಗಿ ಏಕೆ ಘಟನೆ ನಡೆದಿದೆ ಎಂದು ತಿಳಿಯಲು ನಾವು ಸಂತ್ರಸ್ತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಆ ವ್ಯಕ್ತಿಯನ್ನು ಏಕೆ ಥಳಿಸಿದ್ದಾರೆ ಎಂದು ತಿಳಿಯಲು ಕಾನ್‌ಸ್ಟೆಬಲ್‌ನ ಹೇಳಿಕೆಯನ್ನು ಸಹ ದಾಖಲಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಲು ಯಾರಿಗೂ ಅವಕಾಶವಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net