ಅಬಲೆಯರೆಂಬ ಕೀಳರಿಮೆ ಕಿತ್ತೊಗೆಯಿರಿ

tth (7)
ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಲೇಖಕಿ ಪದ್ಮಜಾ ಜೋಯ್ಸ ಅವರನ್ನು ಗೌರವಿಸಲಾಯಿತು. ಗೀತಾ ರಮೇಶ್, ಜ್ಯೋತಿ ಮೋಹನ್, ಮಹಾಬಲೇಶ್ವರ ಹೆಗಡೆ, ಜ್ಯೋತಿ ದಿಲೀಪ್ ಇದ್ದರು.
Published on

ತೀರ್ಥಹಳ್ಳಿ: ಇನ್ನೊಂದು ಜೀವಕ್ಕೆ ಜನ್ಮ ನೀಡುವ ಸಾಮರ್ಥ್ಯ ಹೊಂದಿರುವ ಮಹಿಳೆ ಎಂದಿಗೂ ಅಬಲೆಯಲ್ಲ. ಪ್ರಸ್ತುತ ಸಮಾಜದ ಎಲ್ಲ ಸ್ತರಗಳಲ್ಲಿ ತೊಡಗಿಸಿಕೊಂಡಿರುವ ಆಕೆ ಪುರುಷರಷ್ಟೇ ಸಮರ್ಥಳು ಎಂದು ಸಾಮಾಜಿಕ ಕಾರ್ಯಕರ್ತೆ ರಮ್ಯಾ ಅನಿಲ್ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಮಲೆನಾಡು ಮಹಿಳಾ ಟ್ರಸ್ಟ್‌ನಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಹೊನಲುಬೆಳಕಿನ ಮಲೆನಾಡು ಮಹಿಳಾ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾತೃತ್ವ ಮತ್ತು ನೇತೃತ್ವದಲ್ಲಿ ಸಮರ್ಥರಾಗಿರುವ ನಾವು ಅಬಲೆ ಎಂಬ ಕೀಳರಿಮೆ ಕಿತ್ತೊಗೆದು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮುಖಂಡ ಹೆದ್ದೂರು ನವೀನ್ ಮಾತನಾಡಿ, ಸ್ವಾಭಿಮಾನದ ಸಂಕೇತವಾಗಿರುವ ಹೆಣ್ಣಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದೆ. ವಿಜ್ಞಾನ, ಉದ್ಯಮ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಛಾಪು ಮೂಡಿಸಿದ್ದಾಳೆ ಎಂದು ತಿಳಿಸಿದರು.

ಕಾರ್ಯಕ್ರಮದ ಆಯೋಜಕಿ ನಯನಾ ಶೆಟ್ಟಿ ಮಾತನಾಡಿ, ಮಹಿಳೆಯರ ಆರೋಗ್ಯ, ರಕ್ಷಣೆ, ಸ್ವಾವಲಂಬಿ ಬದುಕಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ಲೇಖಕಿ ಹಾಗೂ ಕಲಾವಿದೆ ಪದ್ಮಜಾ ಜೋಯ್ಸ ಅವರನ್ನು ಗೌರವಿಸಲಾಯಿತು.

ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯೆ ಜ್ಯೋತಿ ಮೋಹನ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ವಕೀಲ ವೀರೇಂದ್ರಕುಮಾರ್, ಜ್ಯೋತಿ ದಿಲೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net