ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ

2.npk--1
ನಾಪೋಕ್ಲು ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ವಲಯ ಅಧ್ಯಕ್ಷ ಭೇಟಿ ಕಾರ್ಯಕ್ರಮದಲ್ಲಿ ಕನ್ನಂಡ ಬೊಲ್ಲಪ್ಪ ಮಾತನಾಡಿದರು.
Published on

ನಾಪೋಕ್ಲು: ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಲಯನ್ಸ್ ವಲಯ ಅಧ್ಯಕ್ಷ ಕನ್ನಂಡ ಬೊಲ್ಲಪ್ಪ ಹೇಳಿದರು.

ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದಲ್ಲಿ ಬುಧವಾರ ಆಯೋಜಿಸಲಾಗಿದ್ದ ಲಯನ್ಸ್ ವಲಯ ಅಧ್ಯಕ್ಷ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಲಯನ್ಸ್ ಸಂಸ್ಥೆ ಸ್ಥಾಪನೆಯಾಗಿ 67 ವರ್ಷಗಳು ಸಂದಿವೆ. ನಾಪೋಕ್ಲು ಲಯನ್ಸ್ ಸಂಸ್ಥೆಯ ಘಟಕ ಸ್ಥಾಪನೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹಲವು ಜನ ಹಣ, ಸಮಯವನ್ನು ತ್ಯಾಗ ಮಾಡಿದ್ದಾರೆ. ಎಲ್ಲರೂ ದೇಶದ ಸೇವೆಗೆ ತಮ್ಮ ಸಮಯ ಮೀಸಲಿಡಬೇಕು. ಶಿಕ್ಷಣ, ಮಹಿಳಾ ಬಲವರ್ಧನೆ ಸೇರಿದಂತೆ ಉತ್ತಮ ಧ್ಯೇಯಗಳನ್ನು ಈಡೇರಿಸಲು ಸಂಸ್ಥೆ ಕಾರ್ಯತತ್ಪರವಾಗಿದೆ. ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ಪಾಲಕರು ಪ್ರೇರೇಪಿಸಿ ಮಕ್ಕಳಿಗೆ ಸೇವಾ ಮನೋಭಾವದ ಮಹತ್ವ ತಿಳಿಸಿಕೊಡಬೇಕು ಎಂದರು.

ಅಮೆರಿಕದಲ್ಲಿ ಸ್ಥಾಪನೆಯಾದ ಲಯನ್ಸ್ ಸಂಸ್ಥೆ ಇಂದು ದೇಶ-ವಿದೇಶದಲ್ಲಿ ಹಬ್ಬಿದೆ. ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲೂ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಕುರು ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಹಾಡುಗಳನ್ನು ಹಾಡಿ ರಂಜಿಸಿದರು. ಲಯನ್ಸ್ ಪ್ರಾಂತೀಯ ರಾಯಭಾರಿ ಮೋಹನ್‌ದಾಸ್(ಎಂಜೆಎಫ್), ನಾಪೋಕ್ಲು ಲಯನ್ಸ್ ಸಂಸ್ಥೆ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕುಂಡ್ಯೊಳಡ ಗಣೇಶ್ ಮುತ್ತಪ್ಪ, ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಹಾಗೂ ಲಿಯೋ ಕ್ಲಬ್ ಕಾರ್ಯದರ್ಶಿ ಪಿ.ಬಿ. ನವಲ್ ನಾಚಪ್ಪ, ಬಡ್ಡಿಯರ ನಳಿನಿ, ಕವಿತಾ ಬೊಲ್ಲಪ್ಪ, ಲಯನ್ಸ್ ಖಜಾಂಜಿ ಕಾಂಡಂಡ ರೇಖಾ ಪೊನ್ನಣ್ಣ, ಲಿಯೋ ಅಧ್ಯಕ್ಷ ಪಿ.ಎಂ.ಅಬೀಭಾ, ಖಜಾಂಚಿ ಎನ್.ಪಿ.ಧ್ರುವ ದೇವಯ್ಯ, ವಲಯದ ವಿವಿಧ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net